

ಪೆರ್ಲ: ಪ್ರಣವ್ ಫೌಂಡೇಷನ್ ಹಾಗೂ ಆರ್.ವಿ ಚಾರಿಟೆಬಲ್ ಟ್ರಸ್ಟ್ ಸಹಯೋಗದ ಪುಸ್ತಕ 2024, ಉಚಿತ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಪಡ್ರೆ ಸರ್ಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆ ಕಜಂಪಾಡಿಯಲ್ಲಿ ಜರಗಿತು.
ಶಾಲೆಯ ಮುಖ್ಯಶಿಕ್ಷಕ ಮಂಜುನಾಥ ಬಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲೆಯ ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಹಾಗೂ ನಿವೃತ್ತ ಪ್ರಾಚಾರ್ಯ ಯತೀಶ್ ಕುವಾರ್ ರೈ ಪುಸ್ತಕ ವಿತರಿಸಿ ಮಾತನಾಡಿ, ಅರ್ಹ ಶಾಲೆಗಳನ್ನು ಗುರುತಿಸಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಅಭಿನಾರ್ಹ ಎಂದರು.
ನಿವೃತ್ತ ಪ್ರಾಧ್ಯಾಪಕ ಮಧುಸೂದನ ಎಂ. ಶುಭ ಹಾರೈಸಿದರು. ಫೌಂಡೇಷನ್ ಟ್ರಸ್ಟಿ ಗುರುರಂಜನ ಪುಣಿಚಿತ್ತಾಯ, ವಿಜಯರಾಜ್ ಪಿ ಉಪಸ್ಥಿತರಿದ್ದರು. ಅಧ್ಯಾಪಕ ಕಮಲಾಕ್ಷ ನಾಯಕ್ ಸ್ವಾಗತಿಸಿ, ಕೃಷ್ಣರಾಜ ವಂದಿಸಿದರು.