ಪೆರ್ಲ: ಎಣ್ಮಕಜೆ ಪಂಚಾಯಿತಿ ಬಂಟ್ಸ್ ಸರ್ವೀಸ್ ಸೊಸೈಟಿ ವತಿಯಿಂದ ಬಂಟರಕೂಟ ಕಾರ್ಯಕ್ರಮ ಇಡಿಯಡ್ಕ ಕ್ಷೇತ್ರ ಸಭಾಂಗಣದಲ್ಲಿ ಜರುಗಿತು.
ಧ್ವಜಾರೋಹಣ, ಭಜನೆ, ಕುಣಿತ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜಿಲ್ಲಾ ಬಂಟರ ಸಂದ ಅಧ್ಯಕ್ಷ ಐ.ಸುಬ್ಬಯ್ಯ ರೈ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ಸ್ ಸೊಸೈಟಿ ಅಧ್ಯಕ್ಷ ನಾರಾಯಣ ಆಳ್ವ ಎಣ್ಮಕಜೆ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಪಿರ್ಕಾ ಬಂಟ್ಸ್ ಸೊಸೈಟಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಕಾಟುಕುಕ್ಕೆ ಕ್ಷೇತ್ರ ಆಡಳಿತ ಮೊಕ್ತೇಸರ ತಾರಾನಾಥ ರೈ ಪಡ್ಡಂಬೈಲ್, ಜಿಲ್ಲಾ ಬಂಟರ ಸಂದ ಕೋಶಾಧಿಕಾರಿ ಚಿದಾನಂದ ಆಳ್ವ, ಜಿಲ್ಲಾ ಬಂಟರ ಸಂದ ಸದಸ್ಯ ಬಿ.ಎಸ್.ಗಾಂಭೀರ್, ಸದಾನಂದ ಶೆಟ್ಟಿ ಕುದ್ವ, ಕೊರಗಪ್ಪ ರೈ ಅಮೆಕ್ಕಳ, ಹರಿಪ್ರಸಾದ್ ಶೆಟ್ಟಿ, ರಾಜಾರಾಮ ಶೆಟ್ಟಿ ಪಟ್ಲ, ಬಂಟ್ಸ್ ಮಹಿಳಾ ಸರ್ವೀಸ್ ಸೊಸೈಟಿ ಅಧ್ಯಕ್ಷೆ ರಾಜೇಶ್ವರಿ ಮೊದಲಾದವರಿದ್ದರು.
ಯುಎಇ ಮನಿ ಎಕ್ಸ್ಚೇಂಜ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಕುವಾರ್ ಶೆಟ್ಟಿ ಎಣ್ಮಕಜೆ, ನಾಟಿ ವೈದ್ಯೆ ನಳಿನಿ ಕುಂಬತ್ತೊಟ್ಟಿ, ನಿವೃತ್ತ ಸೈನಿಕ ಚಂದ್ರಶೇಖರ ರೈ ಬಾಳೆಮೂಲೆ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಂಟ್ಸ್ ಸರ್ವೀಸ್ ಸೊಸೈಟಿ ಕಾರ್ಯದರ್ಶಿ ಶರತ್ಚಂದ್ರ ಶೆಟ್ಟಿ ಶೇಣಿ ಸ್ವಾಗತಿಸಿದರು. ಸುಪ್ರಿಯಾ ರೈ ನಿರೂಪಿಸಿದರು. ಜತೆ ಕಾರ್ಯದರ್ಶಿ ರಮೇಶ್ಚಂದ್ರ ರೈ ವಂದಿಸಿದರು.