

ಮಂಜೇಶ್ವರ: ತೊಟ್ಟೆತ್ತೋಡಿ ವಾಣಿವಿಲಾಸ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ಸಭೆ ವಸಂತ ಭಟ್ ತೊಟ್ಟೆತ್ತೋಡಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಜಿಲ್ಲಾ ವಿದ್ಯಾಧಿಕಾರಿಯಾಗಿ ಭಡ್ತಿ ಹೊಂದಿದ ಇಬ್ರಾಹಿಂ ಬಿ. ಅವರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಎ ಪ್ಲಸ್ ಗಳಿಸಿದ ಹಳೇ ವಿದ್ಯಾರ್ಥಿಗಳಾದ ಕೌಶಿಕ್ ಶೆಟ್ಟಿ ದೇರಂಬಳ, ದೀಕ್ಷಾ ಸಿ.ಚಿಗುರುಪಾದೆ ಅವರನ್ನು ಅಭಿನಂದಿಸಲಾಯಿತು. ಎಸ್ಸೆಸ್ಸೆಲ್ಸಿ ಸ್ಕಾಲರ್‌ಷಿಪ್ ಪಡೆದ ಗಿಶಾನ್ ಟಿ.ಸಿ. ಅವರನ್ನು ಅಭಿನಂದಿಸಲಾಯಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ವಾಡಲಾಯಿತು.
ಶಾಲಾ ಪ್ರಬಂಧಕ ಡಾ.ಜಯಪ್ರಕಾಶ್, ಟಿ.ಕೆ.ಲಕ್ಷ್ಮೀಶ, ಬಿ.ದಿನೇಶ್ ಅಮ್ಮೆನಡ್ಕ, ಡಾ.ಚರಣ್, ವಿನೋದ್‌ರಾಜ್, ಉಮೇಶ, ಅಬ್ದುಲ್ ರಜಾಕ್, ಯಶೋದಾ ಸಿ, ವಿದ್ಯಾ, ಕೃತಿ, ಹೇವಾವತಿ, ಗಣೇಶ ಜಪ್ಪ, ದೇವದಾಸ ಸೇನವ ಮೊದಲಾದವರಿದ್ದರು. ಮುಖ್ಯಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿದರು. ಜಯಲಕ್ಷ್ಮೀ ಕತ್ತರಿಕೋಡಿ ನಿರೂಪಿಸಿದರು. ದೀಕ್ಷಾ ಕೆ. ವಂದಿಸಿದರು.