

ಸುಳ್ಯ: ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ತಾಲೂಕುಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಸ್ತ್ರೀಶಕ್ತಿ ಭವನ ಸುಳ್ಯದಲ್ಲಿ ಹಮ್ಮಿಕೊಳ್ಳಲಾಯಿತು.
ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉದ್ಘಾಟನೆ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ವರ್ಷಿಣಿ ಶೆಣೈ, ಪೂರಕ ಆಹಾರದ ಮಹತ್ವ, ಸ್ಥಳೀಯ ಆಹಾರ ಸಂಪನ್ಮೂಲ ಸಂಗ್ರಹಣೆ ಬಗ್ಗೆ ಮಾರ್ಗದರ್ಶನ ನೀಡಿದರು. ಡಾ.ಜಯಶ್ರೀ ಶ್ರೀಕಾಂತ್ ಭಟ್ ಆರೋಗ್ಯಕರ ಜೀವನ ಶೈಲಿ ಬಗ್ಗೆ ಮಾಹಿತಿ ನೀಡಿದರು.
ಪೌಷ್ಟಿಕ ಆಹಾರ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸೀಮಂತ ಕಾರ್ಯಕ್ರಮ ಮತ್ತು ಆರು ತಿಂಗಳು ತುಂಬಿದ ಮಗುವಿಗೆ ಅನ್ನಪ್ರಾಶನ ನಡೆಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ, ನಪಂ ಮುಖ್ಯಾಧಿಕಾರಿ ಸುಧಾಕರ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸುಹಾನ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ತಿರುಮಲೇಶ್ವರಿ ಹಾಜರಿದ್ದರು.
ವಲಯ ಮೇಲ್ವಿಚಾರಕಿ ರವಿಶ್ರೀ ನಿರೂಪಿಸಿದರು. ವಲಯ ಮೇಲ್ವಿಚಾರಕಿ ದೀಪಿಕಾ ಸ್ವಾಗತಿಸಿದರು. ವಿಜಯ ವಂದಿಸಿದರು.