ಉಪ್ಲೇರಿ ಸನ್ನಿಧಿ ಆದಿಮೂಲದಲ್ಲಿ ಅಷ್ಟಮಂಗಲ ಪ್ರಶ್ನೆ

ಬದಿಯಡ್ಕ: ವಾಂತಿಚ್ಚಾಲು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸೇವಾ ಟ್ರಸ್ಟ್‌ನ ನೇತೃತ್ವದಲ್ಲಿ ಶ್ರೀ ಗುಳಿಗ ದೈವದ ಆದಿಮೂಲ ಬನ ಸ್ಥಳದ(ಅಟ್ಟೆಪ್ಪಾಡಿ ಕಲ್ಲು) ಜೀರ್ಣೋದ್ಧಾರದ ವಿಷಯದಲ್ಲಿ ಅಷ್ಟಮಂಗಲ ಸ್ವರ್ಣ ಪ್ರಶ್ನಾಚಿಂತನೆ ದೈವಜ್ಞ ಶಶಿಧರನ್ ಮಾಂಗಾಡ್ ಹಾಗೂ ರಾಜೇಶ್ ಎರಿಯ, ದೈವಜ್ಞ ಕೇಶವ ಭಟ್ ನೆಲ್ಲಿಕ್ಕಳೆಯ, ಸೂರಜ್ ನೀಲೇಶ್ವರ ನೇತೃತ್ವದಲ್ಲಿ ಟ್ರಸ್ಟಿನ ಅಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಉಪಸ್ಥಿತಿಯಲ್ಲಿ ನಡೆಯಿತು.

543 ವರ್ಷಗಳ ಇತಿಹಾಸವಿರುವ ಈ ಸನ್ನಿಧಿಯ ಮೂಲಬನ ಸ್ಥಳವು ಕಳೆದ 40 ವರ್ಷಗಳಿಂದ ಅನ್ಯಾಧೀನವಾಗಿದ್ದ ಹಿನ್ನೆಲೆಯಲ್ಲಿ ರಸ್ತೆಯ ಬದಿಯಲ್ಲೇ ಗುಳಿಗನನ್ನು ಆರಾಧಿಸಿಕೊಂಡು ಬರಲಾಗುತ್ತಿತ್ತು. ಪ್ರಸ್ತುತ ಮೂಲಬನಸ್ಥಳವನ್ನು ಖರೀದಿಸಿದ ದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಟ್ರಸ್ಟಿಗೆ ದಾನರೂಪದಲ್ಲಿ ನೀಡಿದ್ದಾರೆ.

ಮ್ಯಾನೇಜಿಂಗ್ ಟ್ರಸ್ಟಿ ಪ್ರಧಾನಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ನಿರ್ದೇಶಕ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಗೋಪಾಲಕೃಷ್ಣ ಪೈ ಬದಿಯಡ್ಕ, ಜಗನ್ನಾಥ ರೈ ಕೊರೆಕ್ಕಾನ, ಗೌರವ ಸಲಹೆಗಾರ ಕೃಷ್ಣ ಬೆಳ್ಚಪ್ಪಾಡ ಉಪ್ಲೇರಿ, ರಾಮನಾಯ್ಕ ಕುಂಟಾಲುಮೂಲೆ, ಶಿವರಾಮ ಸಾಲ್ಯಾನ್ ವಾಂತಿಚ್ಚಾಲು, ಸಮಿತಿಯ ಆಡಳಿತ ಸಲಹಾ ಸಮಿತಿ ನಿರ್ದೇಶಕ ಸುಕುಮಾರ ಉಪ್ಲೇರಿ, ರಮೇಶ್ ನಾಯ್ಕಪು, ಆನಂದ ಬೈಕ್ಕುಂಜ, ತಾರಾನಾಥ ರೈ, ಸಂಜೀವ ಶೆಟ್ಟಿ ಮೊಟ್ಟೆಕುಂಜ, ಪ್ರದೀಪ್ ಕಳತ್ತೂರು, ಜಯರಾಮ ಪಾಟಾಳಿ ಪಡುಮಲೆ ಮೊದಲಾದವರು ಉಪಸ್ಥಿತರಿದ್ದರು.

Share This Article

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…

ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips

ಪ್ರಸ್ತುತ ಕಾರ್ಯನಿರತ ಜೀವನ ಮತ್ತು ಕಳಪೆ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ…