ನವದೆಹಲಿ: ಕೊರೋನಾ ವೈರಸ್ ಪ್ರಭಾವ ಇನ್ನೂ ಮುಂದುವರಿದಿದ್ದು, ಇದರ ರೂಪಾಂತರಿ ತಳಿಗಳು ತನ್ನ ಕಬಂಧ ಬಾಹುಗಳನ್ನು ಇನ್ನೂ ಚಾಚುತ್ತಲೇ ಇದೆ. ಇದರದ್ದೇ ಚಂಡೀಪುರ ವೈರಸ್ ಎಂಬ ಹೊಸ ತಳಿ ಈಗ ಸದ್ದು ಮಾಡುತ್ತಿದೆ. ಇದರಿಂದ ಗುಜರಾತ್ನಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: 40 ದಿನಗಳಲ್ಲಿ ಏಳನೇ ಬಾರಿಗೆ ಹಾವು ಕಡಿತ.. ಹಾವುಗಳು ನಿಜವಾಗಿಯೂ ಸೇಡು ತೀರಿಸಿಕೊಳ್ಳುತ್ತವೆಯೇ?
ಇತ್ತೀಚೆಗಷ್ಟೇ ಗುಜರಾತ್‌ನ ಸಬರ್ಕಾಂತ ಜಿಲ್ಲೆಯಲ್ಲಿ ಜ್ವರ ಮತ್ತು ಶೀತ, ತಲೆನೋವಿನಂತಹ ಲಕ್ಷಣಗಳೊಂದಿಗೆ ನಾಲ್ಕು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಅವರು ಸಾವನ್ನಪ್ಪಿದ್ದಾರೆ. ಜುಲೈ 10 ರಂದು ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ಅವರ ಕುಟುಂಬಗಳಲ್ಲಿ ಆತಂಕದ ಛಾಯೆ ಆವರಿಸಿದೆ.
ಹಿಮ್ಮತ್‌ನಗರ ಆಸ್ಪತ್ರೆಯ ಮಕ್ಕಳ ವೈದ್ಯರು ಚಂಡಿಪುರ ವೈರಸ್‌ನಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದಾರೆ. ಇನ್ನೆರಡು ಮಕ್ಕಳಲ್ಲಿ ಇದೇ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಆರು ಮಕ್ಕಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಗೆ ಕಳುಹಿಸಲಾಗಿದೆ. ಅಲ್ಲಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಸಬರಕಾಂತ ಜಿಲ್ಲಾ ಆರೋಗ್ಯ ಅಧಿಕಾರಿ ರಾಜ್ ಸುತಾರಿಯಾ ತಿಳಿಸಿದ್ದಾರೆ.
ಚಂಡಿಪುರ ವೈರಸ್ ಸೋಂಕು ತಗುಲಿದ ಕೆಲವೇ ದಿನಗಳಲ್ಲಿ ರೋಗಿಯು ಸಾಯುತ್ತಾನೆ. ಇದು ಸೊಳ್ಳೆಗಳು ಮತ್ತು ಕೀಟಗಳಿಂದ ಹರಡುತ್ತದೆ. ಈ ವೈರಸ್ ಸೋಂಕಿತರಲ್ಲಿ ಜ್ವರ ಮತ್ತು ಶೀತ, ತಲೆನೋವಿನ ತರಹದ ಲಕ್ಷಣಗಳು ಕಂಡುಬರುತ್ತವೆ.
‘ಕಾಲ್ಪನಿಕ ದೃಶ್ಯ ಕಾವ್ಯ’ ಅನಂತ್ ಅಂಬಾನಿ – ರಾಧಿಕಾ ಮದುವೆ: ಭಾವೋದ್ವೇಗಕ್ಕೆ ಒಳಗಾದ ವಧು!