ಮೂಡಂಬೈಲಲ್ಲಿ ರಂಗಮಂದಿರಕ್ಕೆ ಶಂಕುಸ್ಥಾಪನೆ

New Project (26)
Published on

ಮಂಜೇಶ್ವರ: ಮೂಡಂಬೈಲು ಸರ್ಕಾರಿ ಪ್ರೌಢಶಾಲಾ ಶತಮಾನೋತ್ಸವದ ಸವಿ ನೆನಪಿಗಾಗಿ ನಿರ್ಮಿಸಲಿರುವ ರಂಗಮಂದಿರದ ಶಂಕು ಸ್ಥಾಪನೆ ಕಾರ್ಯಕ್ರಮ ಶಾಲಾ ವಠಾರದಲ್ಲಿ ಭಾನುವಾರ ನಡೆಯಿತು.

ಶಾಲಾ ಬೆಂಬಲ ಸಮಿತಿ ಅಧ್ಯಕ್ಷ ಶಿವರಾಮ ಪದಕಣ್ಣಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಶಂಕುಸ್ಥಾಪನೆ ನೆರವೇರಿಸಿದರು.

ಪದ್ಮಶ್ರೀ ಹರೇಕಳ ಹಾಜಬ್ಬ, ನಟ ಪುಷ್ಪರಾಜ್ ಬೋಳಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ, ವಾರ್ಡ್ ಸದಸ್ಯ ಜಯರಾಮ ಬಲ್ಲಂಗುಡೆಲು, ಮಂಜೇಶ್ವರ ಎಇಒ ಜಾರ್ಜ್ ಕ್ರಾಸ್ತಾ, ಕಂಚಿಲ ಮಹಮ್ಮದ್, ನಿವೃತ್ತ ಅಧ್ಯಾಪಕ ಬಾಲಕೃಷ್ಣ ಭಂಡಾರಿ ದಡ್ಡಂಗಡಿ, ಪಿ.ಟಿ.ಎ. ಅಧ್ಯಕ್ಷ ಅಬ್ದುಲ್ ಕುಂಞ್ಞೆ ಪಜಿಂಗಾರ್, ಎಂಪಿಟಿಎ ಅಧ್ಯಕ್ಷೆ ಅನುಪಮಾ ನಾಯ್ಕ, ಓಂ.ಎಸ್.ಎ. ಅಧ್ಯಕ್ಷ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಬಶೀರ್ ಮೂಡಂಬೈಲು, ಇಬ್ರಾಹಿಂ, ರಮಾ ಭಾಯಿ ಮೊದಲಾದವರಿದ್ದರು.

ಮುಖ್ಯಶಿಕ್ಷಕಿ ದಯಾವತಿ ಸಾಲ್ಯಾನ್ ಸ್ವಾಗತಿಸಿದರು. ವಕೀಲ ದಾಮೋದರ ಶೆಟ್ಟಿ ಪ್ರಸ್ತಾವಿಸಿದರು. ಅರವಿಂದಾಕ್ಷ ಭಂಡಾರಿ ನಿರೂಪಿಸಿದರು. ಪ್ರಚಾರ ಸಮಿತಿ ಸಂಚಾಲಕ ಜಗದೀಶ್ ಮೂಡಂಬೈಲು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net