

ವಿಜಯವಾಣಿ ಸುದ್ದಿಜಾಲ ಸುಳ್ಯ
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪ.ಪೂ. ಕಾಲೇಜಿನ ಸಹಯೋಗದಲ್ಲಿ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗ ಶ್ರೀ ಶಾರದಾಂಬ ವೇದಿಕೆಯಲ್ಲಿ ನಡೆದ ಪ.ಪೂ ವಿಭಾಗದ ಜಿಲ್ಲಾಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟದ ಹುಡುಗರ ವಿಭಾಗದಲ್ಲಿ ಉಜಿರೆ ಎಸ್ಡಿಎಂ, ಹುಡುಗಿಯರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ತಂಡ ಪ್ರಥಮ ಸ್ಥಾನ ಪಡೆದಿದೆ.
ಹುಡುಗರ ವಿಭಾಗದಲ್ಲಿ ಮಂಗಳೂರಿನ ಮಿಲಾಗ್ರಿಸ್ ಕಾಲೇಜು ಹಾಗೂ ಹುಡುಗಿಯರ ವಿಭಾಗದಲ್ಲಿ ಕೆನರಾ ಕಾಲೇಜು ದ್ವಿತೀಯ ಸ್ಥಾನ ಪಡೆದಿದೆ. ಸವಾರ್ಂಗೀಣ ಆಟಗಾರ ಪ್ರಶಸ್ತಿಗೆ ಮಿಲಾಗ್ರಿಸ್ನ ಮುಸ್ತಾಫ, ಆಳ್ವಾಸ್ನ ಹಂಶಿಕ ಭಾಜನರಾದರು. ಉತ್ತಮ ದಾಳಿಗಾರರಾಗಿ ಎಸ್ಡಿಎಂನ ಕಾರ್ತಿಕ್, ಕೆನರಾ ಕಾಲೇಜಿನ ಆತ್ಮಿಕಾ ವಿ ಶೆಟ್ಟಿ, ಉತ್ತಮ ಹಿಡಿತಗಾರರಾಗಿ ಎಸ್ಡಿಎಂನ ಸತ್ಯ, ಆಳ್ವಾಸ್ನ ಚೈತಿಕಾ ವೈಯಕ್ತಿಕ ಪ್ರಶಸ್ತಿ ಪಡೆದರು.
ಸಮಾರೋಪ: ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಕಾಲೇಜು ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು, ಎನ್ನೆಂಸಿ ಕಾಲೇಜು ಪ್ರಾಚಾರ್ಯ ಡಾ.ರುದ್ರ ಕುಮಾರ್ ಎಂ.ಎಂ, ಕ್ರೀಡಾ ವೀಕ್ಷಕ ಶಶಿಧರ ಮಾಣಿ, ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ್ ಶೆಟ್ಟಿ, ಎನ್ನೆಂಪಿಯುಸಿ ಪ್ರಾಚಾರ್ಯ ಮಿಥಾಲಿ ಪಿ. ರೈ ಬಹುಮಾನ ವಿತರಿಸಿದರು. ಸುಳ್ಯ ಎನ್ನೆಂಪಿಯುಸಿಯ ಕಬಡ್ಡಿ ಕೋಚ್ ನಾಗರಾಜ್ ನಾಯ್ಕ ಭಟ್ಕಳ ಸಹಕರಿಸಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ.ಬಿ ಸ್ವಾಗತಿಸಿದರು. ಉಪನ್ಯಾಸಕಿ ಸುಚೇತಾ ಎಂ. ವಂದಿಸಿದರು.ವಿಜಯ್ ಅತ್ತಾಜೆ ಹಾಗೂ ತೀರ್ತೆಶ್ ಯಾದವ್ ವೀಕ್ಷಕ ವಿವರಣೆಯಲ್ಲಿ ಸಹಕರಿಸಿದರು.