ಆಸರೆ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ

stone
ಆಸರೆ ಮನೆ ನಿರ್ಮಾಣ ಕಾರ್ಯಕ್ಕೆ ವಿಜಯಕುಮಾರ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ಗಿರೀಶ್ ಭಟ್, ಹರೀಶ್ ಶೆಟ್ಟಿ ಮೊದಲಾದವರಿದ್ದರು
Published on

ಗೋಳಿಯಂಗಡಿ: ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಜನತಾ ಕಾಲನಿ ನಿವಾಸಿ ವಿಜಯ ನಾಯ್ಕ ಕುಟುಂಬಕ್ಕೆ ದಾನಿಗಳ ಜತೆಗೂಡಿ ಗೋಳಿಯಂಗಡಿ ಪ್ರಜ್ಞಾ ಯುವಕ ಮಂಡಲ ವತಿಯಿಂದ ಆಸರೆ ಮನೆ ನಿರ್ಮಾಣಗೊಳ್ಳುತ್ತಿದ್ದು, ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ವೈ ವಿಜಯಕುಮಾರ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.

ಗಿರೀಶ್ ಭಟ್ ಹಳ್ಳಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. 6 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣಗೊಳ್ಳುತ್ತಿದೆ. ಉದ್ಯಮಿ ಹರೀಶ್ ಶೆಟ್ಟಿ ಗೋಳಿಯಂಗಡಿ, ಶ್ರೀಧರ ಆಚಾರ್ಯ, ಚಂದ್ರ ಆಚಾರ್ಯ, ದಿ.ವಿಜಯ ನಾಯ್ಕ ಆಸರೆ ಮನೆ ನಿರ್ಮಾಣ ಕ್ರಿಯಾ ಸಮಿತಿ ಅಧ್ಯಕ್ಷ ಪ್ರವೀಣ ಗುಮ್ಮೋಲ, ಪದಾಧಿಕಾರಿಗಳು, ವಿಜಯ ನಾಯ್ಕ ಕುಟುಂಬಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net