

ಬೆಳ್ವೆ: ದೇವಳಗಳಲ್ಲಿ ನಡೆಯುವ ಅನ್ನಪ್ರಸಾದ ಸೇವೆಯಿಂದ ಸಾನ್ನಿಧ್ಯದ ಪಾವಿತ್ರ್ಯ ವೃದ್ಧಿಸುತ್ತದೆ. ದಾನಿಗಳು, ಭಕ್ತರು ನೀಡುವ ಅನ್ನದಾನ ಸೇವೆ ಅತಿ ಶ್ರೇಷ್ಠ ಎಂದು ಜ್ಯೋತಿಷಿ ರಮೇಶ ಬಾಯರಿ ವಂಡಾರು ಹೇಳಿದರು.
ಬೆಳ್ವೆ ಸಮೀಪದ ಮರೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಳ ಟ್ರಸ್ಟ್ ವತಿಯಿಂದ ದಾನಿಗಳು ಹಾಗೂ ಭಕ್ತರ ಸಹಕಾರದೊಂದಿಗೆ ಪ್ರತಿ ಸಂಕ್ರಮಣ ದಿನದಂದು ನಡೆಯುವ ಅನ್ನಪ್ರಸಾದ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ರಮೇಶ ಬಾಯರಿ ತಮ್ಮ ತಾಯಿ ದಿ.ಶಾರದ ಬಾಯರಿ ಸ್ಮರಣಾರ್ಥ 1 ಲಕ್ಷ ರೂ.ವನ್ನು ದೇವಳದ ಅನ್ನದಾನ ಸೇವೆಗೆ ನೀಡಿದರು. ದೇವಳದಲ್ಲಿ ಸಂಕ್ರಮಣ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು
ನೇಪಾಳ ಪಶುಪತಿ ದೇವಳದ ನಿವೃತ್ತ ಅರ್ಚಕ ಮಹಾಬಲೇಶ್ವರ ಬಾಯರಿ, ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಸೆಟ್ಟೋಳಿ, ಪ್ರಮುಖರಾದ ಶ್ರೀಧರ ಬಾಯರಿ, ಶ್ರೀನಿವಾಸ ಬಾಯರಿ, ಬಾಲಕೃಷ್ಣ ಭಟ್, ಸತ್ಯನಾರಾಯಣ ಹೆಬ್ಬಾರ್, ವೈ ಪಟಾಭಿರಾಮ್ ಭಟ್, ಸತೀಶ್ ಶೆಟ್ಟಿ, ವೈ.ಉದಯಕುಮಾರ್ ಭಟ್, ನಾಗರಾಜ ಹೆಬ್ಬಾರ್, ರಾಘವೇಂದ್ರ ಬಾಯರಿ, ದಿನೇಶ್ ಕಿಣಿ, ಬಿ.ಹರೀಶ್ ಕಿಣಿ, ಟಿ.ರಘುರಾಮ ಶೆಟ್ಟಿ, ದೇವಣ್ಣ ನಾಯ್ಕ, ರಮೇಶ್ ನಾಯ್ಕ ಭಕ್ತರು ಉಪಸ್ಥಿತರಿದ್ದರು.