ಕೈ ಪಕ್ಷದಿಂದ ಮತ್ತೊಂದು ಕಪಾಳಮೋಕ್ಷ; ಸಿದ್ದರಾಮಯ್ಯ ಅಭಿಮಾನಿಯ ಕೆನ್ನೆಗೆ ಬಾರಿಸಿದ ಮಾಜಿ ಸಚಿವ...

Meti
Published on

ಬಾಗಲಕೋಟೆ: ಕೈಯನ್ನೇ ಲಾಂಛನವಾಗಿ ಹೊಂದಿರುವ ಕಾಂಗ್ರೆಸ್​ ಪಕ್ಷದಿಂದ ಮತ್ತೊಂದು ಕಪಾಳಮೋಕ್ಷ ನಡೆದಿದೆ. ಕಾಂಗ್ರೆಸ್​ನ ಮಾಜಿ ಸಚಿವರೊಬ್ಬರು ಪಕ್ಷದ ಕಾರ್ಯಕರ್ತನ ಮೇಲೇ ಕೈ ಮಾಡಿದ್ದು, ಕೆನ್ನೆಗೆ ಬಾರಿಸಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್​ ಕಾರ್ಯಕರ್ತರೊಬ್ಬರ ಕೆನ್ನೆಗೆ ಬಾರಿಸಿದ್ದರು. ಇದೀಗ ಮಾಜಿ ಸಚಿವ ಎಚ್​.ವೈ. ಮೇಟಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿಯೊಬ್ಬರ ಕೆನ್ನೆಗೆ ಬಾರಿಸಿದ್ದಾರೆ.

ಬಾದಾಮಿಯಲ್ಲಿ ಇಂದು ನಡೆದ ಕಲ್ಯಾಣಮಂಟಪವೊಂದರ ಉದ್ಘಾಟನೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಸಮೀಪದಿಂದ ನೋಡಲು ಜನರು ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಮೇಟಿ ಕೂಡ ತಳ್ಳಾಟ-ನೂಕಾಟಕ್ಕೆ ಒಳಗಾಗಿದ್ದರು.

ಈ ಜನಜಂಗುಳಿಯಲ್ಲಿ ವ್ಯಕ್ತಿಯೊಬ್ಬ ಕಾಲು ತುಳಿದ ಎಂಬ ಕಾರಣಕ್ಕೆ ಸಿಟ್ಟಾದ ಮಾಜಿ ಸಚಿವ ಎಚ್​.ವೈ. ಮೇಟಿ ಆತನ ಕೆನ್ನೆಗೆ ಬಾರಿಸಿದ್ದಾರೆ. ಪೆಟ್ಟು ತಿಂದಿರುವುದು ಶಿರೂರ ಗ್ರಾಮದ ಸಿದ್ದು ಎಂಬವರಾಗಿದ್ದು, ಇವರು ಸಿದ್ದರಾಮಯ್ಯ ಅವರ ಅಭಿಮಾನಿ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net