ಅಮಿತ್ ಷಾ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿರೂಪ!

kse-4
Published on

ಮಂಗಳೂರು: ದೇಶದ ಗೃಹ ಸಚಿವ ಅಮಿತ್ ಷಾ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಪ್ರತಿರೂಪ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಧರ್ಮಸ್ಥಳದಲ್ಲಿ ಹೇಳಿದ್ದಾರೆ.

ಗೃಹ ಮಂತ್ರಿಯಾಗಿ ದೇಶದ ರಕ್ಷಣೆ ಮಾಡುತ್ತಿರೋ ಅವಿತ್ ಷಾ ಅವರಿಗೆ ಡಾ.ಡಿ,ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದ ಪ್ರಸಾದ ಕೊಟ್ಟಿದ್ದಾರೆ. ಇದನ್ನು ನಾನು ಇಂದು ಅಮಿತ್ ಷಾ ಅವರಿಗೆ ತಲುಪಿಸುತ್ತೇನೆ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಾರ ಮಾಡಲಿದ್ದಾರೆ. ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ ಸಂಸ್ಥೆ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಸಂಭ್ರಮ ಸಮಾವೇಶದಲ್ಲಿ ಅಮಿತ್ ಷಾ ಭಾಗಿಯಾಗುತ್ತಿದ್ದಾರೆ.

ಸಮಾವೇಶದಲ್ಲಿ ಪುತ್ತೂರು, ಕಡಬ, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಭಾಗದ ಸಾರ್ವಜನಿಕರು ಹಾಗೂ ಜಿಲ್ಲೆಯ ಸಹಕಾರಿ ಇಲಾಖೆಗೆ ಸಂಬಂಧಿಸಿದ 66 ಸಾವಿರ ಫಲಾನುಭವಿಗಳು ಭಾಗವಹಿಸುತ್ತಿದ್ದಾರೆ. ಮುಖ್ಯಮಂತ್ರಿ, ಗೃಹಸಚಿವರು, ಸಹಕಾರ ಸಚಿವರು ಸೇರಿದಂತೆ ಸುಮಾರು 12-13 ಮಂದಿ ಸಚಿವರು ಸಮಾವೇಶಕ್ಕೆ ಹಾಜರಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net