ಹುಡುಗಿ ಜತೆ ಅಸಭ್ಯವಾಗಿ ವರ್ತಸಿದ ಸಹೋದರರ ತಲೆ ಬೋಳಿಸಿ ಮೆರವಣಿಗೆ; 7 ಜನ ತಾಂಡಾ ಮುಖಂಡರ ಬಂಧನ

111
Published on

ವಿಜಯಪುರ: ಹುಡುಗಿ ವಿಚಾರಕ್ಕೆ ಯುವಕರಿಬ್ಬರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗ್ರಾ.ಪಂ ಅಧ್ಯಕ್ಷ ಸೇರಿ 7 ಜನ ತಾಂಡಾ ಮುಖಂಡರನ್ನು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅನೀಲ್ ಲಮಾಣಿ, ಮಂಗೇಶ್, ಹೇಮು, ರಮೇಶ, ರಾಜು, ಚನ್ನು, ರಾಮಸಿಂಗ್ ಲಮಾಣಿ ಬಂಧಿತರು.

ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಹೋಗಿದ್ದ ವೇಳೆಯಲ್ಲಿ ಹುಡುಗಿ ಜತೆಗೆ ಅಸಭ್ಯ ವರ್ತನೆ ನಡೆಸಿದ್ದ ತೇಜು ಚವಾಣ್ ಹಾಗೂ ರಾಜು ಚವಾಣ್ ಎಂಬ ಇಬ್ಬರು ಸಹೋದರರನ್ನು ಲಂಬಾಣಿ ಸಮುದಾಯದ ಮುಖಂಡರು ಅವರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ್ದರು.

ಅವಳಿ ಸಹೋದರರಾಗಿರುವ ಇಬ್ಬರನ್ನು ಗ್ರಾಮದ ಮುಖಂಡರ ಸಮ್ಮುಖದಲ್ಲೇ ತಲೆ ಬೋಳಿಸಿ ಮೆರವಣಿಗೆ ನಡೆಸಲಾಗಿತ್ತು. ಇದೀಗ ಐಪಿಸಿ ಸೆಕ್ಷನ್ 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಏಳು ಜನರ ಬಂಧನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net