

ಕೋಲ್ಕತ್ತಾ: ಪ್ರೀತಿ ಪ್ರೇಮಕ್ಕೆ ವಯಸ್ಸಿಲ್ಲ ಎಂಬುದು ಹಳೆಯ ಗಾದೆ ಮಾತಾಯಿತು, ಇದೀಗ ಮದುವೆಗೂ ವಯಸ್ಸಿನ ಮಿತಿ ಇಲ್ಲ ಎಂಬುದಕ್ಕೆ ಹಲವು ಉದಾಹರಣೆಗಳನ್ನು ಕಾಣಬಹುದು.
ಹೌದು.. ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಅವರು ತಮ್ಮ ಮೊದಲ ಪತ್ನಿಯ ಒಪ್ಪಿಗೆ ಮೇರೆಗೆ ಎರಡನೇ ವಿವಾಹವಾಗಲಿದ್ದಾರಂತೆ. 38 ವರ್ಷದ ಬುಲ್ ಬುಲ್ ಶಾ ಎಂಬ ಮಹಿಳೆಯೊಂದಿಗೆ ಮುಂದಿನ ತಿಂಗಳು ಅಂದರೆ ಮೇ 2ರಂದೇ ಇವರ ವಿವಾಹ ನಿಶ್ಚಯವಾಗಿದೆಯಂತೆ.
ಮಾರ್ಚ್ನಲ್ಲೇ ಇಬ್ಬರು ನಿಶ್ಚಿತಾರ್ಥ ಕೂಡ ನೆರವೇರಿಸಿಕೊಂಡಿದ್ದು, ಮೊದಲ ಪತ್ನಿಯೊಂದಿಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದರು. ಆದರೂ ಅವರೊಂದಿಗೆ ವಾಸವಿದ್ದ ಅರುಣ್ ಲಾಲ್ ಅವರು ಈಗ ಪತ್ನಿ ಒಪ್ಪಿಗೆ ಯಿಂದಲೇ ಎರಡನೇ ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.ಇನ್ನು ಇವರ ಮೊದಲ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಅರುಣ್ ಲಾಲ್ ಅವರು 1982 ರಿಂದ 1989ರವರೆಗೆ ಭಾರತ ಕ್ರಿಕೆಟ್ ತಂಡದ ಪರವಾಗಿ ಆಟವಾಡಿದ್ದಾರೆ. ಇನ್ನು ಇವರ ಮದುವೆಗೆ ಬೆಂಗಾಲ್ ಕ್ರಿಕೆಟ್ ತಂಡದ ಸದಸ್ಯರೂ ಸೇರಿದಂತೆ ಆಪ್ತರಿಗೆ ಆಹ್ವಾನ ನೀಡಿದ್ದಾರೆ.