ಶಾಲೆಗೆ ರಜೆ ಇದ್ದಿದ್ದೇ ಮುಳುವಾಯ್ತು: ಈಜಲು ಹೋಗಿದ್ದ ಬಾಲಕರಿಬ್ಬರು ದಾರುಣ ಸಾವು

Death Swim
Published on

ಹಾವೇರಿ: ಬೇಸಿಗೆ ಎಂಬ ಕಾರಣಕ್ಕೆ ನದಿಗೆ ಗೆಳೆಯರೊಡನೆ ಈಜಲು ಹೋಗಿದ್ದ ಐವರು ಬಾಲಕರ ಪೈಕಿ ಇಬ್ಬರು ಪೃತಪಟ್ಟಿರುವ ದಾರುಣ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ನಿಖಿಲ್ ಕಿಲಾರಿ (14) ಸಂಜಯ್ ಚಳಗೇರಿ (14) ಮೃತ ದುರ್ದೈವಿಗಳು,ಮೃತರು ತಾಲೂಕಿನ ಮಾಸೂರು ಗ್ರಾಮದ ನಿವಾಸಿಗಳು.ಸೋಮವಾರ ಮಧ್ಯಾಹ್ನ ಕುಮದ್ವತಿ ನದಿಯಲ್ಲಿ ಈಜಾಡುವಾಗ ಇಬ್ಬರು ಮುಳುಗಿದ್ದಾರೆ. ನಿಖಿಲ್​ ಮೃತದೇಹ ಹೊರತೆಗೆಯಲಾಗಿದ್ದು, ಸಂಜಯನಿಗಾಗಿ ಶೋಧ ಮುಂದುವರಿದಿದೆ. ಹಿರೆಕೇರೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net