

ನವದೆಹಲಿ: ಮರೆವು ಮಾನವನ ಸಹಜ ಸ್ವಭಾವ. ಆದರೆ, ಅದು ಹೆಚ್ಚಾದರೂ ಕೂಡ ಅಪಾಯವೇ. ಪ್ರತಿಯೊಬ್ಬರಲ್ಲೂ ಮರೆವು ಇದ್ದೇ ಇರುತ್ತದೆ. ಅದರಲ್ಲೂ ವಿವಾಹಿತ ಪುರುಷರಿಗೆ ಮರೆವು ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಕೆಲವೊಮ್ಮೆ ಮದುವೆ ದಿನ, ಪತ್ನಿಯ ಹುಟ್ಟುಹಬ್ಬ ಸೇರಿದಂತೆ ಪ್ರಮುಖ ದಿನಗಳನ್ನೇ ಮರೆತು ಬಿಡುತ್ತಾರೆ. ಈ ರೀತಿಯಾದಾಗ ಗಂಡ, ಪತ್ನಿಯ ರೌದ್ರಾವತಾರಕ್ಕೆ ಸಿಕ್ಕಿ ನಲುಗಿ ಹೋಗುವುದಂತೂ ಸತ್ಯ. ಪತಿ-ಪತ್ನಿಯರ ನಡುವೆ ಮಹಾಯುದ್ಧವೇ ನಡೆದುಬಿಡುತ್ತದೆ.
ಎಷ್ಟೋ ಸಂದರ್ಭಗಳಲ್ಲಿ ಪತ್ನಿಯ ಹುಟ್ಟುಹಬ್ಬವನ್ನು ಮರೆತಿದ್ದಕ್ಕೆ ಗಂಡಂದಿರು ಭಾರೀ ಬೆಲೆ ತೆರಬೇಕಾಗುತ್ತದೆ. ಆದರೆ, ಈ ಒಂದು ಸ್ಥಳದಲ್ಲಿ ಮಾತ್ರ ಹೆಂಡತಿಯ ಹುಟ್ಟುಹಬ್ಬವನ್ನು ಮರೆತುಬಿಡುವುದು ಸಹ ಘೋರ ಅಪರಾಧವಾಗಿದೆ. ಮರೆತವರಿಗೆ ಐದು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗುತ್ತದೆ. ಕಾನೂನುಗಳು ಎಷ್ಟು ಕೆಟ್ಟದಾಗಿವೆ ಎಂಬುದನ್ನು ಈ ದೇಶವೇ ಉದಾಹರಣೆ.
ಹೌದು, ಸಮೋವಾ ಎಂಬ ದೇಶವಿದೆ. ಇದು ಪಾಲಿನೇಷ್ಯನ್ ದ್ವೀಪ ದೇಶವಾಗಿದೆ. ಇದರ ರಾಜಧಾನಿ ಅಪಿಯಾ. ಸಮೋವನ್ ಸಂಸ್ಕೃತಿಯು ಪಾಲಿನೇಷ್ಯನ್ ಜೀವನಕ್ಕೆ ಕೇಂದ್ರವಾಗಿದೆ. ಇಲ್ಲಿನ ಸಂಗೀತ, ನೃತ್ಯ ಮತ್ತು ದೃಶ್ಯ ಕಲೆಯ ಶೈಲಿಗಳು ಹಾಗೂ ಪೆಸಿಫಿಕ್ ದ್ವೀಪಗಳು ಪ್ರಪಂಚದಾದ್ಯಂತ ಖ್ಯಾತಿಯನ್ನು ಗಳಿಸಿವೆ. ಆದರೆ, ಈ ವಿಚಿತ್ರ ಕಾನೂನಿನ ಕಾರಣಕ್ಕೆ ಸಮೋವಾ ಕುಖ್ಯಾತಿಯನ್ನು ಪಡೆದಿದೆ.
ಸಮೋವಾ ದೇಶದಲ್ಲಿ ಗಂಡ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಮೊದಲ ಬಾರಿಗೆ ಮರೆತರೆ ಎಚ್ಚರಿಕೆ ಕೊಡಲಾಗುತ್ತದೆ. ಒಂದು ವೇಳೆ ಎರಡನೇ ಬಾರಿಯು ಪತ್ನಿಯ ಹುಟ್ಟುಹಬ್ಬ ಮರೆತಲ್ಲಿ ದಂಡವನ್ನು ವಿಧಿಸಿ, ಜೈಲಿಗೆ ಕಳುಹಿಸಲಾಗುತ್ತದೆ. ಸಮೋವಾ ಕಾನೂನಿನ ಪ್ರಕಾರ ಹೆಂಡತಿಯ ಹುಟ್ಟುಹಬ್ಬವನ್ನು ಮರೆತರೆ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.
ಆದರೆ, ಎಲ್ಲರೂ ಈ ಕಾನೂನನ್ನು ಪಾಲಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿಗಾ ಇಡಲು ವಿಶೇಷ ತಂಡ ಸಹ ಇಒದೆ. ಆ ವಿಶೇಷ ತಂಡ ಪೊಲೀಸರಂತೆ ಕೆಲಸ ಮಾಡುತ್ತದೆ. ಹುಟ್ಟುಹಬ್ಬ ಮರೆತಲ್ಲಿ ಈ ತಂಡಕ್ಕೆ ದೂರು ನೀಡಲಾಗುತ್ತದೆ. ಅವರು ಆ ದೂರುಗಳನ್ನು ಸ್ವೀಕರಿಸಿ ತಕ್ಷಣ ಕ್ರಮ ಕೈಗೊಳ್ಳುತ್ತಾರೆ. ಇಂತಹ ಕಾನೂನು ಇದೆ ಎಂದು ಪತಿ-ಪತ್ನಿಯರಿಗೆ ಅರಿವು ಮೂಡಿಸಲು ಜಾಗೃತಿ ಶಿಬಿರಗಳನ್ನೂ ನಡೆಸುತ್ತಾರೆ. (ಏಜೆನ್ಸೀಸ್)