ಗಾಂಧಿನಗರ: ಪ್ರಪಂಚವು ಪ್ರತಿನಿತ್ಯ ಒಂದಿಲ್ಲೊಂದು ವಿಶೇಷ, ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುತ್ತಿರುತ್ತದೆ. ಈ ಘಟನೆಗಳು ಹಲವರು ಅಚ್ಚರಿಘೂ ಕಾರಣವಾಗುತ್ತಿರುತ್ತವೆ. ಇದೀಗ ಫಾರೆಸ್ಟ್ ಗಾರ್ಡ್ (Forest Guard) ಒಬ್ಬರು ಸಿಂಹವೊಂದನ್ನು ಓಡಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಆತನ ದೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಗುಜರಾತ್ನ ಭಾವ್ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಲಿಲ್ಯ ರೈಲ್ವೆ ಕ್ರಾಸಿಂಗ್ ಬಳಿ ಸಿಂಹ ಒಂದು ಇರುವುದನ್ನು ಗಮನಿಸಿದ ಫಾರೆಸ್ಟ್ ಗಾರ್ಡ್ (Forest Guard) ಕೂಡಲೇ ಜೋರಾಗಿ ಕೂಗಿಕೊಂಡು ಅದನ್ನು ಬರಿಗೈಯಲ್ಲಿ ಓಡಿಸಿದ್ದಾರೆ. ಸಿಂಹ ಕೂಡ ತಿರುಗಿಬೀಳದೆ ಅಲ್ಲಿಂದ ಜಾಗ ಖಾಲಿ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
📍Gujarat | #Watch: Forest Department Guard Chases Lion Away From Rail Track
Read more: https://t.co/vwe37wOBhO pic.twitter.com/Bwd2NTCFeJ
— NDTV (@ndtv) January 9, 2025
ಫಾರೆಸ್ಟ್ ಗಾರ್ಡ್ (Forest Guard) ಹೆಸರು ಶಂಭುಜಿ ಎಂದು ತಿಳಿದು ಬಂದಿದ್ದು, ಲಿಲ್ಯ ರೈಲು ನಿಲ್ದಾಣದ ಗೇಟ್ ಸಂಖ್ಯೆ ಎಲ್ಸಿ -31 ರಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ. ಗುಜರಾತ್‌ನಲ್ಲಿ ತಾಪಮಾನ ಕಡಿಮೆಯಾಗುತ್ತಿದ್ದಂತೆ, ಅರಣ್ಯ ಇಲಾಖೆ ನೌಕರರು ಗ್ರಾಮೀಣ ಪ್ರದೇಶಗಳಲ್ಲಿ ಸಿಂಹಗಳ ರಕ್ಷಣೆಯ ಬಗ್ಗೆ ಎಚ್ಚರ ವಹಿಸಿರುವುದಾಗಿ ತಿಳಿಸಿದ್ದಾರೆ.
ಜನವರಿ 06ರಂದು ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ. ಹಲವರು ಇದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಕಮೆಂಟ್ ಮಾಡಿದ್ದು, ಫಾರೆಸ್ಟ್ ಗಾರ್ಡ್ ಧೈರ್ಯವನ್ನು ಹಾಡಿ ಹೊಗಳುತ್ತಿದ್ದಾರೆ.