ಇಂದಿರಾ ಗಾಂಧಿಯವರನ್ನು ಗಟ್ಟಿಗಿತ್ತಿ ಎಂದುಕೊಂಡಿದ್ದೆ, ಅತ್ಯಂತ ದುರ್ಬಲರೆಂದು ಸಂಶೋಧನೆಯಲ್ಲಿ ತಿಳಿಯಿತು: Kangana Ranaut

Kangana
Published on

ನವದೆಹಲಿ: ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಅವರ ಹೆಸರು ಸದಾ ಚಾಲ್ತಿಯಲ್ಲಿರುತ್ತದೆ ಎಂದರೆ ತಪ್ಪಾಗಲಾರದು. ಪ್ರಚೋದನಕಾರಿ ಹಾಗೂ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಕಂಗನಾ ಇದೀಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅತ್ಯಂತ ದುರ್ಬಲರು ಎಂದು ಹೇಳುವ ಮೂಲಕ ವಿವಾದದ ಕಿಡಿಯನ್ನ ಹೊತ್ತಿಸಿದ್ದಾರೆ.

ತಾವು ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಎಮರ್ಜೆನ್ಸಿ ಚಿತ್ರದ ಪ್ರಚಾರ ಕಾರ್ಯದ ವೇಳೆ ನಟಿ ಕಂಗನಾ (Kangana Ranaut) ಈ ಬಗ್ಗೆ ಮಾತನಾಡಿದ್ದು, ತಮ್ಮ ಚಿತ್ರಗಳನ್ನು ನಿರ್ದೇಶಿಸಲು ಅರ್ಹ ನಿರ್ದೇಶಕರೇ ಇಲ್ಲ ಎಂದು ಹೇಳುವ ಮೂಲಕ ಚಿತ್ರರಂಗದ ವಿರುದ್ಧವೂ ಹರಿಹಾಯ್ದಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕಂಗನಾ (Kangana Ranaut), ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಬಹಳ ಗಟ್ಟಿಗಿತ್ತಿ ಎಂದು ಭಾವಿಸಿದ್ದೆ. ಆದರೆ, ಅವರು ಅತ್ಯಂತ ದುರ್ಬಲರು ಮತ್ತು ತಮ್ಮ ಬಗ್ಗೆಯೇ ತಮಗೆ ಸ್ಪಷ್ಟತೆ ಇಲ್ಲವರಾಗಿದ್ದರು ಎಂಬುದು ನಾನು ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

ಇಂದು ನಾನು ಚಿತ್ರರಂಗದಲ್ಲಿ ಕೆಲಸ ಮಾಡಲು ಬಯಸುವ ಒಬ್ಬ ನಿರ್ದೇಶಕ ಇಲ್ಲ. ಈ ವಿಚಾರವನ್ನು ನಾನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಈಗಿನ ಕಾಲದ ನಿರ್ದೇಶಕರು ಅಂತಹ ಗುಣಮಟ್ಟವನ್ನು ಹೊಂದಿಲ್ಲ. ನಾನು ಅವರನ್ನು ಅರ್ಹರೆಂದು ಭಾವಿಸಿಲ್ಲ ಎಂದು ನಟಿ ಕಂಗನಾ ರಣಾವತ್​ (Kangana Ranaut) ಹೇಳಿದ್ದಾರೆ.

1975ರಲ್ಲಿ 21 ತಿಂಗಳ ಕಾಲ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಕಥಾಹಂದರವನ್ನು ಒಳಗೊಂಡಿರುವ ಚಿತ್ರ ಇದಾಗಿದೆ. ಚಿತ್ರವನ್ನು ಕಂಗನಾ ರಣಾವತ್ ಅವರೇ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರವು ಜನವರಿ 17ರಂದು ತೆರೆಕಾಣಲಿದೆ.

https://www.vijayavani.net/uncertain-future-in-test-forces-virat-kohli-to-play-county-cricket-before-england-series-report

https://www.vijayavani.net/two-women-passengers-abuse-pull-hair-inside-delhi-metro-over-seat

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net