ಕಡಲ‌‌ ದಡದಲ್ಲಿ ಪೃಥ್ವಿ-ಮಿಲನಾ ಡ್ಯುಯೆಟ್​ ...

For Registration - Final
Published on

ಬೆಂಗಳೂರು: ನಿಶ್ಚಲ್ ಫಿಲಂಸ್ ಸಂಸ್ಥೆಯಡಿ ಮೂಡಿಬರುತ್ತಿರುವ 'ಫಾರ್ REGN' (For Registration) ಚಿತ್ರದ ಹಾಡಿನ ಚಿತ್ರೀಕರಣ ಮಂಗಳೂರು, ಉಡುಪಿ‌ ಬಳಿಯ ಕಡಲ ದಡದಲ್ಲಿ ನಡೆದಿದ್ದು,ಈ ಹಾಡಿನಲ್ಲಿ ಸ್ಯಾಂಡಲ್​ವುಡ್ ನಲ್ಲಿ ನಿಧಿಮಾ ಎಂದೇ ಖ್ಯಾತರಾಗಿರುವ ಮಿಲನಾ ನಾಗರಾಜ್ ಹಾಗೂ 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಕಾಣಿಸಿಕೊಂಡಿದ್ದಾರೆ.

ಈ ಹಾಡಿನ ಮೂಲಕ 'ಫಾರ್​ ರಿಜಿಸ್ಟ್ರೇಶನ್​' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ದ್ವಿತೀಯ ಹಂತದ ಚಿತ್ರೀಕರಣ ಮಾರ್ಚ್ ಅಂತ್ಯದ ವೇಳೆಗೆ ಆರಂಭವಾಗಲಿದೆ.

'ಫಾರ್​ ರಿಜಿಸ್ಟ್ರೇಶನ್​' ಚಿತರವು ಒಂದು ರೊಮ್ಯಾಂಟಿಕ್​ ಕಾಮಿಡಿಯಾಗಿದ್ದು, ಬೆಂಗಳೂರಿನಲ್ಲಿ ಪ್ರಾರಂಭವಾಗಿತ್ತು. ಪೃಥ್ವಿ ಮತ್ತು ಮಿಲನಾ ಜತೆಗೆ ಸುಧಾರಾಣಿ, ಸುಂದರರಾಜ್, ಸಿಹಿಕಹಿ ಚಂದ್ರು, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ತಬಲಾ ನಾಣಿ, ತ್ರಿವೇಣಿ ರಾವ್, ತುಳು ನಟ ಅರವಿಂದ್ ಬೋಳಾರ್ ಹೀಗೆ ಹಲವು ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರವನ್ನು ನವೀನ್ ದ್ವಾರಕನಾಥ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ನವೀನ್ ರಾವ್ ನಿರ್ಮಾಣ ಮಾಡುತ್ತಿದ್ದಾರೆ. ವಿವೇಕ್ ಎಸ್ ಕೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಗಾರ್ಜುನ ಶರ್ಮ‌ ಅವರು ಬರೆದಿರುವ ಹಾಡುಗಳಿಗೆ ಹರೀಶ್ ಆರ್ ಕೆ ಸಂಗೀತ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net