ಹೈದರಾಬಾದ್​ನಲ್ಲಿ ಬಿಡುಗಡೆ ಪೂರ್ವ ಕಾರ್ಯಕ್ರಮ ಆಯೋಜಿಸಿದ ರಾಬರ್ಟ್ ಚಿತ್ರತಂಡ

Robert
Robert
Published on

ಬೆಂಗಳೂರು: ಕೇವಲ ಕನ್ನಡ ಸಿನಿಪ್ರಿಯರಲ್ಲದೇ ತೆಲಗು ತಮಿಳು ಸಿನಿಪ್ರಿಯರಲ್ಲೂ ತೀವ್ರ ಕುತೂಹಲ ಹುಟ್ಟಿಹಾಕಿರುವ ರಾರ್ಬಟ್​ ಚಿತ್ರ ಮುಂದಿನ ತಿಂಗಳು ಮಾರ್ಚ್ 11 ರಂದು ತೆರೆಗೆ ಬರಲು ಸಿದ್ದವಾಗಿದೆ.

ಈಗಾಗಲೇ ಬಿಡುಗಡೆಗೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವ ಚಿತ್ರ ತಂಡ ತೆಲಂಗಾಣ, ಆಂಧ್ರಪ್ರದೇಶದ ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಚಿತ್ರ ಬಿಡುಗಡೆಗೂ ಮುನ್ನ ಫೆ 26 ರಂದು ರಾಬರ್ಟ್,​ ಪ್ರಿ ರಿಲೀಸ್ ಇವೆಂಟ್​ನ್ನು ಆಯೋಜಿಸಿದೆ. ಈ ಇವೆಂಟ್ ಹೈದರಾಬಾದ್​ ಫಿಲ್ಮನಗರದ ಜೆಆರ್​ಸಿ ಕನ್ವೆನ್ಷನ್ ಹಾಲ್​ನಲ್ಲಿ ನಡೆಯಲಿದೆ. ಈ ವಿಷಯವನ್ನು ಸ್ವತಃ ದರ್ಶನ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಕಾರ್ಯಕ್ರಮ ಏನು, ಅದರ ರೂಪುರೇಷೆಗಳೇನು ಎಂಬುದನ್ನು ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ. ಆದರೆ, ಬಿಡುಗಡೆಗೂ ಮುನ್ನ ಹೈದರಾಬಾದ್​ನಲ್ಲಿ ರಾಬರ್ಟ್​ ಧೂಳ್ ಎಬ್ಬಿಸಲಿದೆ. ಪೊಗರು ಚಿತ್ರತಂಡವೂ ಕೂಡ ಕಳೆದ ವಾರ ದಾವಣಗೇರೆಯಲ್ಲಿ ಆಡಿಯೋ ಲಾಂಚ್​ ಕಾರ್ಯಕ್ರಮವನ್ನು ಆಯೋಜಿಸಿ ಭರ್ಜರಿ ಮುನ್ನುಡಿ ಬರೆದಿತ್ತು. ಇದೇ ರೀತಿ ರಾಬರ್ಟ್​ ಚಿತ್ರತಂಡವೂ ಸಿನಿಮಾಕ್ಕೆ ವ್ಯಾಪಕವಾದ ಪ್ರಚಾರ ಕೊಡಲು ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಇನ್ನು ಇಂತಹದೇ ಕಾರ್ಯಕ್ರಮವನ್ನು ಫೆ 28 ರಂದು ಹುಬ್ಬಳ್ಳಿಯಲ್ಲೂ ನಡೆಸಲು ರಾಬರ್ಟ್​ ಚಿತ್ರತಂಡ ತೀರ್ಮಾನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net