ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ವಿಮಾನ ನಿಲ್ದಾಣದಿಂದ 3 ಹೊಸ ಮಾರ್ಗಗಳಲ್ಲಿ (ಗೋವಾ, ತಿರುಪತಿ, ಹೈದ್ರಾಬಾದ್)ಗೆ ಸ್ಟಾರ್ ಏರ್ ಲೈನ್ಸ್ ನ ವಿಮಾನ ಸಂಚಾರ ಮಂಗಳವಾರದಿಂದ ಅಧಿಕೃತವಾಗಿ ಆರಂಭಗೊಂಡಿತು. 3 ಹೊಸ ಮಾರ್ಗಗಳಲ್ಲಿ ವಾರದಲ್ಲಿ ನಾಲ್ಕು ದಿನ ವಿಮಾನ ಹಾರಾಟ ನಡೆಸಲಿವೆ.
ಇದನ್ನೂ ಓದಿ: ದಾಖಲೆ ಬರೆಯುತ್ತಿದೆ ದೇಶೀಯ ವಿಮಾನಯಾನ: ನಿತ್ಯ 1.20 ಕೋಟಿ ಮಂದಿ ಪ್ರಯಾಣ!
ಹೈದರಾಬಾದ್ನಿಂದ ಆಗಮಿಸಿದ ಮೊದಲ ಸ್ಟಾರ್ ಫ್ಲೈಟ್ ಅನ್ನು ಬರಮಾಡಿಕೊಂಡಬಳಿಕ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಮಲೆನಾಡಿನಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ಗೆ ಸಂಚರಿಸುವ ಪ್ರಯಾಣಿಕರಿಗೆ ಸೇವೆ ಒದಗಿಸಲು ಸ್ಟಾರ್ ವಿಮಾನ ಸಂಸ್ಥೆ ಮುಂದಾಗಿದೆ. ಮೊದಲನೇ ದಿನವೇ 400 ಪ್ರಯಾಣಿಕರು ಸಂಚರಿಸುವುದು ವಿಶೇಷವಾಗಿದೆ ಎಂದರು.
ವಿಮಾನ ಹಾರಟವು ಉಡಾನ್ ಯೋಜನೆಯಡಿ ಆರಂಭಿಸಲಾಗಿದ್ದು, ಕೈಗಾರಿಕೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಈ ಏರ್ ಪೋರ್ಟ್ ಪೂರಕವಾಗಿದೆ. ಸ್ಪೈಸ್ ಜೆಟ್ ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳು ಶಿವಮೊಗ್ಗಕ್ಕೆ ಬರಲು ಆಸಕ್ತಿ ವ್ಯಕ್ತಪಡಿಸಿವೆ. ಇನ್ನು ಏರ್ ಪೋರ್ಟ್ನಲ್ಲಿ ಇರುವ ಮಂಜಿನ ವಾತಾವರಣ ಮತ್ತು ತಾಂತ್ರಿಕ ದೋಷಗಳ ಕುರಿತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಏರ್ ಪೋರ್ಟ್ ಮತ್ತಷ್ಟು ಅಭಿವೃದ್ಧಿ ಹೊಂದಬೇಕೆಂದು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕೂಡ ಡಿಸೆಂಬರ್ ವೇಳೆಗೆ ಆರಂಭವಾಗಲಿದೆ. ಕಡಿಮೆ ಖರ್ಚಿನಲ್ಲಿ ಸುಂದರ ಏರ್ ಪೋರ್ಟ್ ನಿರ್ಮಿಸಿರುವುದು ಮಲೆನಾಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿದಿದರು.
ಈಗಾಗಲೇ ಶಿವಮೊಗ್ಗ-ಬೆಂಗಳೂರು ನಡುವೆ ಇಂಡಿಗೋ ವಿಮಾನ ಸಂಚರಿಸುತ್ತಿದೆ. ಇದೀಗ ಸ್ಟಾರ್ ಏರ್ ಲೈನ್ಸ್ ವಿಮಾನಗಳು ಶಿವಮೊಗ್ಗದಿಂದ ಗೋವಾ, ಹೈದರಾಬಾದ್, ತಿರುಪತಿಗೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ಹಾರಾಟ ನಡೆಸಲಿವೆ.
ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡ ಇಂಡಿಗೋ, 6 ಜನ ಪ್ರಯಾಣಿಕರೊಂದಿಗೆ ವಿಮಾನ ಹಾರಿಸಲು ನಿರಾಕರಣೆ