More

    ದಾಖಲೆ ಬರೆಯುತ್ತಿದೆ ದೇಶೀಯ ವಿಮಾನಯಾನ: ನಿತ್ಯ 1.20 ಕೋಟಿ ಮಂದಿ ಪ್ರಯಾಣ!

    ನವದೆಹಲಿ: ದೇಶೀಯ ವಿಮಾನಯಾನ ದಾಖಲೆ ಬರೆದಿದೆ. ಪ್ರಯಾಣಿಕರ ಸಂಖ್ಯೆ ಅಕ್ಟೋಬರ್‌ನಲ್ಲಿ ಶೇ.11ರಷ್ಟು ಏರಿಕೆ ಕಂಡಿದೆ. ಅಂದರೆ 1.26 ಕೋಟಿ ಜನ ಪ್ರಯಾಣ ಮಾಡಿದ್ದಾರೆ. ಗುರುವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ ಅಕ್ಟೋಬರ್ 2022 ರಲ್ಲಿ 1.14 ಕೋಟಿ ಪ್ರಯಾಣಿಕರು ಮತ್ತು ಈ ವರ್ಷದ ಸೆಪ್ಟೆಂಬರ್‌ನಲ್ಲಿ 1.22 ಕೋಟಿ ಪ್ರಯಾಣಿಕರು ವಿಮಾನ ಪ್ರಯಾಣ ಮಾಡಿದ್ದಾರೆ.

    ಇದನ್ನೂ ಓದಿ: ಯುಎಸ್​ ಡಾಲರ್​ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ – 83.35 ರೂ.ತಲುಪಿದ ಭಾರತ ಕರೆನ್ಸಿ
    ಭಾರತೀಯ ವಿಮಾನಯಾನ ಸಂಸ್ಥೆಗಳು ನಿತ್ಯ 4ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ಸಾಗಿಸುತ್ತವೆ. ಭಾನುವಾರ(ನ.19) ಹೊಸ ದಾಖಲೆ ಬರೆದಿದ್ದು, 5,958 ವಿಮಾನ ಸಂಚಾರ ಮಾಡಿವೆ. ಇವುಗಳಲ್ಲಿ 4,56,910 ಮಂದಿ ಪ್ರಯಾಣಿಸಿದ್ದಾರೆ. ಕಳೆದ ವರ್ಷ ನವೆಂಬರ್ 19 ರಂದು 5,506 ವಿಮಾನಗಳ ಮೂಲಕ 3,93,391 ಪ್ರಯಾಣಿಕರು ಸಂಚರಿಸಿದ್ದರು. ಕಳೆದ ಶನಿವಾರ ಏರ್ ಟ್ರಾಫಿಕ್ 4,56,748 ಇತ್ತೆಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
    ಕರೋನ ನಂತರ ದೇಶೀಯ ವಿಮಾನಯಾನ ಸ್ಪೂರ್ತಿದಾಯಕವಾಗಿದೆ. ಸಕಾರಾತ್ಮಕ ಮನೋಭಾವ, ಪ್ರಗತಿಪರ ನೀತಿಗಳು ಮತ್ತು ಪ್ರಯಾಣಿಕರಲ್ಲಿ ಆಳವಾದ ನಂಬಿಕೆಯು ಪ್ರತಿ ದಿನವೂ ಪ್ರತಿ ವಿಮಾನದೊಂದಿಗೆ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ X(ಎಕ್ಸ್​) ನಲ್ಲಿನ ಪೋಸ್ಟ್‌ನಲ್ಲಿ ಹೇಳಿದೆ.

    ವಿಶ್ವದ ದೊಡ್ಡ ವಾಯುಯಾನ: ದೇಶವು ವಿಶ್ವದ ಅತಿದೊಡ್ಡ ವಾಯುಯಾನ ಮಾರುಕಟ್ಟೆಯಾಗುವುದನ್ನು ಯಾರೂ ತಡೆಯಲಾಗದು. ವಾಯುಯಾನ ಸಾಮೂಹಿಕ ಸಾಧನವಾಗುತ್ತಿರುವುದನ್ನು ಈ ಬೆಳವಣಿಗೆ ಸೂಚಿಸುತ್ತದೆ. ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಾಗರಿಕ ವಿಮಾನಯಾನಗಳಲ್ಲಿ ಭಾರತವೂ ಒಂದಾಗಿದ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ‘X’ನಲ್ಲಿ ಅಂಕಿ ಸಂಖ್ಯೆ ಸಮೇತ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

    ಏತನ್ಮಧ್ಯೆ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಸಿಎಸ್​ಎಂಐಎ) ಅಕ್ಟೋಬರ್‌ನಲ್ಲಿ 4.25 ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸಿದ್ದಾರೆ ಎಂದು ತಿಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.18 ಬೆಳವಣಿಗೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 0.94 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

    ಇಂಡಿಗೋ ಸಿಂಹಪಾಲು: ವೈಮಾನಿಕ ನಿಯಂತ್ರಕ ಡಿಜಿಸಿಎ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಇಂಡಿಗೋ 79.07 ಲಕ್ಷ ಪ್ರಯಾಣಿಕರನ್ನು ಸಾಗಿಸಿದೆ, ಅಕ್ಟೋಬರ್‌ನಲ್ಲಿ ದೇಶೀಯ ಮಾರುಕಟ್ಟೆ ಪಾಲನ್ನು ಶೇ.62.6 ಗಳಿಸಿದೆ. ಈ ಸಂಸ್ಥೆ 79.07 ಲಕ್ಷ ಪ್ರಯಾಣಿಕರನ್ನು ಸಾಗಿಸಿದೆ, ಅಕ್ಟೋಬರ್‌ನಲ್ಲಿ ದೇಶೀಯ ಮಾರುಕಟ್ಟೆ ಪಾಲನ್ನು ಶೇ. 62.6 ಗಳಿಸಿದೆ. ಏರ್ ಏಷ್ಯಾ ಇಂಡಿಯಾ ಷೇರುಗಳು ಕುಸಿದವು. ಸ್ಪೈಸ್‌ಜೆಟ್‌ನ ಪಾಲು ಶೇ.5ಕ್ಕೆ ಏರಿಕೆ ಕಂಡಿದ್ದು, ಆಕಾಶ ಏರ್ ಶೇ.4.2 ರಲ್ಲಿ ಸ್ಥಿರವಾಗಿತ್ತು.

    ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಮುಹೂರ್ತ ಫಿಕ್ಸ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts