More

    ಯುಎಸ್​ ಡಾಲರ್​ ಎದುರು ರೂಪಾಯಿ ಸಾರ್ವಕಾಲಿಕ ಕನಿಷ್ಠ – 83.35 ರೂ.ತಲುಪಿದ ಭಾರತ ಕರೆನ್ಸಿ

    ಮುಂಬೈ: ಯುಎಸ್ ಡಾಲರ್ ಎದುರು ರೂಪಾಯಿ 9 ಪೈಸೆ ಇಳಿಕೆಯಾಗಿದ್ದು, ಸೋಮವಾರ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 83.35 ರೂ.ತಲುಪಿತು. ಇದು ಷೇರುಪೇಟೆಯಲ್ಲಿ ದೇಶೀಯ ಷೇರುಗಳಲ್ಲಿ ನಕಾರಾತ್ಮಕ ಪ್ರವೃತ್ತಿಗೆ ಕಾರಣವಾಗಿದೆ. ವಿದೇಶಿ ನಿಧಿಯ ಹೊರಹರಿವು ಇಳಿಕೆಗೆ ಕಾರಣ ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಮುಹೂರ್ತ ಫಿಕ್ಸ್​​
    ಮಾರುಕಟ್ಟೆಯಲ್ಲಿ ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ 83.25 ರೂ.ನೊಂದಿಗೆ ಪ್ರಾರಂಭವಾಯಿತು ಮತ್ತು ಡಾಲರ್‌ಗೆ ವಿರುದ್ಧವಾಗಿ ಇತಿಹಾಸದಲ್ಲೇ ಕನಿಷ್ಠ ಮಟ್ಟವಾದ 83.35 ರೂ.ಗೆ ಬಂದು ತಲುಪಿತು. ಕಡೆಗೆ 9 ಪೈಸೆ ಕುಸಿತವನ್ನು ದಾಖಲಿಸಿತು.

    ಶುಕ್ರವಾರ ಅಮೆರಿಕದ ಕರೆನ್ಸಿ ಎದುರು ರೂಪಾಯಿ 83.26ಕ್ಕೆ ಸ್ಥಿರವಾಗಿತ್ತು. ಇದಕ್ಕೂ ಮುನ್ನ ಈ ವರ್ಷದ ನವೆಂಬರ್ 13 ರಂದು ಡಾಲರ್ ವಿರುದ್ಧ ರೂಪಾಯಿ ತನ್ನ ಕನಿಷ್ಠ ಮಟ್ಟವಾದ 83.33 ಕ್ಕೆ ತಲುಪಿತ್ತು. ಆರು ಕರೆನ್ಸಿಗಳ ವಿರುದ್ಧ ಗ್ರೀನ್‌ಬ್ಯಾಕ್‌ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.42 ಕಡಿಮೆಯಾಗಿ 103.48 ರಲ್ಲಿ ವಹಿವಾಟು ನಡೆಸುತ್ತಿದೆ.

    ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಶೇಕಡಾ 0.66 ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ ಯುಎಸ್​ಡಿ 81.14 ಕ್ಕೆ ತಲುಪಿದೆ.
    ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 139.58 ಪಾಯಿಂಟ್ ಅಥವಾ 0.21 ಶೇಕಡಾ ಕುಸಿದು 65,655.15 ಅಂಕಗಳಿಗೆ ಸ್ಥಿರವಾಯಿತು. ನಿಫ್ಟಿ 37.80 ಪಾಯಿಂಟ್ ಅಥವಾ 0.19 ರಷ್ಟು ಕುಸಿದು 19,694.00 ಅಂಕಗಳಿಗೆ ತಲುಪಿದೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ ಬಂಡವಾಳ ಮಾರುಕಟ್ಟೆಯಲ್ಲಿ 477.76 ಕೋಟಿ ರೂ.ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

    ‘ಆಸ್ಟ್ರೇಲಿಯಾ’ ಅಲ್ಲ, ಅದು ಪಾಂಡವರ ‘ಅಸ್ತ್ರಾಲಯ’..ಅದಕ್ಕೇ ಗೆದ್ದಿದೆ – ನ್ಯಾ.ಕಾಟ್ಜು ಹೇಳಿಕೆಗೆ ನೆಟ್ಟಿಗರು ಏನೆಂದರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts