

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಬೆಳಗಾವಿ ಆಶ್ರಯದಲ್ಲಿ ನಡೆದ ವಿಟಿಯು 26ನೇ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು 2 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕಗಳೊಂದಿಗೆ 5 ಪದಕಗಳನ್ನು ಪಡೆದುಕೊಂಡಿದೆ.
ಬಾಲಕರ ವಿಭಾಗ: ನಿರೀಕ್ಷಿತ್ ನಾಯಕ್ - ಚಕ್ರಎಸೆತ (ಪ್ರಥಮ), ವಿನಾಯಕ್- ತ್ರಿವಿಧ ಜಿಗಿತ (ದ್ವಿತೀಯ), ನಟರಾಜ್-ಡೆಕಥ್ಲಾನ್ (ತೃತೀಯ), ವಿನಾಯಕ್- 4x400 ಮೀ. ರಿಲೇ (ದ್ವಿತೀಯ), ಬಸವರಾಜ್- 4x400 ಮೀ ರಿಲೇ (ದ್ವಿತೀಯ), ಭಾವೇಶ್- 4x400 ಮೀ. ರಿಲೇ (ದ್ವಿತೀಯ), ಆನಂದ್- 4x400 ಮೀ ರಿಲೇ (ದ್ವಿತೀಯ).
ಬಾಲಕಿಯರ ವಿಭಾಗ: ಸಿಂಧು ಭಟ್- ಪೋಲ್ ವಾಲ್ಟ್ (ಪ್ರಥಮ) ಸ್ಥಾನ ಪಡೆದರು. ಪೋಲ್ ವಾಲ್ಟ್ ವಿಟಿಯು 2.40 ಮೀ ಹೊಸ ದಾಖಲೆ ಮಾಡಿದ್ದಾರೆ. ಸಾಧಕ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.