ಬಾಲಕಿಯ ಜತೆ ಅಸಭ್ಯ ವರ್ತಿಸಿದ್ದಾತನಿಗೆ ಶಿಕ್ಷೆ

misbehave
Published on

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಯಾರು ಪದವಿನಲ್ಲಿ 16ರ ಹರೆಯದ ಬಾಲಕಿಯ ಮುಂದೆ ನಗ್ನವಾಗಿ ಅಸಭ್ಯ ವರ್ತನೆ ತೋರಿದ್ದ ವಿಟ್ಲ ಸರೊಳಿ ಹೌಸ್ ನಿವಾಸಿ ಅಬ್ದುಲ್ ಹಕೀಂ ಎಂಬಾತನಿಗೆ ಕಾಸರಗೋಡು ಫಾಸ್ಟ್‌ಟ್ರಾೃಕ್ ವಿಶೇಷ ನ್ಯಾಯಾಲಯ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಅಪರಾಧಿ ಮೂರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. 2019ರಲ್ಲಿ ಪೈವಳಿಕೆ ಪಂಚಾಯಿತಿಯ ಬಾಯಾರುಪದವಿನಲ್ಲಿ ಘಟನೆ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net