ಬಲೆಯೊಳಗೆ ಸಿಲುಕಿ ಮೀನುಗಾರ ಮೃತ್ಯು

fisherman
Published on

ಪಡುಬಿದ್ರಿ: ಸಮುದ್ರದಲ್ಲಿ ಶುಕ್ರವಾರ ಮುಂಜಾನೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಮೀನುಗಾರಿಕಾ ಬಲೆಯೊಳಗೆ ಸಿಲುಕಿ ಕಾಪು ಪೊಲಿಪುವಿನ ಕಿಶೋರ್(29) ಎಂಬುವರು ಮೃತಪಟ್ಟಿದ್ದಾರೆ.

ಪ್ರತಿದಿನ ಕಯಾಕ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆ ಮಾಡುತ್ತಿದ್ದ ಅವರು ಶುಕ್ರವಾರ ಮುಂಜಾನೆ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಅವರು ಬಲೆಯೊಳಗೆ ಸಿಲುಕಿ ಮೃತಪಟ್ಟಿದ್ದಾರೆ. ಸಮುದ್ರದಲ್ಲಿ ಕಯಾಕ್ ತೇಲುತ್ತಿದ್ದನ್ನು ಗಮನಿಸಿದ ಮತ್ತೊಂದು ಮೀನುಗಾರಿಕಾ ದೋಣಿಯವರು ಕಯಾಕ್ ಸಹಿತ ಅದರಲ್ಲಿದ್ದ ಮೃತದೇಹವನ್ನು ದಡಕ್ಕೆ ತಂದಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net