

ಮುಲ್ತಾನ್: ಇಲ್ಲಿನ ಮುಲ್ತಾನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ (Test Series) ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡವು ಸಂಪೂರ್ಣ ಮೇಲುಗೈ ಸಾಧಿಸುವ ಮೂಲಕ ಆತಿಥೇಯರಿಗೆ ಶಾಕ್ ನೀಡಿದ್ದು, ಹೀನಾಯವಾಗಿ ಸೋಲಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ 556 ರನ್ ಗಳಿಸಿದ ಹೊರತಾಗಿಯೂ 47 ರನ್ ಹಾಗೂ ಇನ್ನಿಂಗ್ಸ್ ಸೋಲು ಕಂಡಿರುವ ಪಾಕಿಸ್ತಾನ ತಂಡವು ತೀವ್ರ ಟೀಕೆಗೆ ಗುರಿಯಾಗಿದ್ದು, 147 ವರ್ಷಗಳ ಟೆಸ್ಟ್ ಕ್ರಿಕೆಟ್ (Test Cricket) ಇತಿಹಾಸದಲ್ಲಿ ಅನಪೇಕ್ಷಿತ ದಾಖಲೆಯೊಂದನ್ನು ಮಾಡಿದೆ.
147 ವರ್ಷಗಳ ಸುದೀರ್ಘ ಟೆಸ್ಟ್ ಕ್ರಿಕೆಟ್ (Test Cricket) ಇತಿಹಾಸದಲ್ಲಿ, ಯಾವುದೇ ತಂಡವು ಪಾಕಿಸ್ತಾನದ ರೀತಿ ಸೋಲನ್ನು ಎದುರಿಸಿಲ್ಲವಂತೆ. ಇಂಗ್ಲೆಂಡ್ ಎದುರು ಹೀನಾಯವಾಗಿ ಸೋಲುವ ಮೂಲಕ ಪಾಕಿಸ್ತಾನ ತಂಡವು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಮುಖಭಂಗವನ್ನು ಅನುಭವಿಸಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.
ಮುಲ್ತಾನ್ ಕ್ರೀಡಾಂಗಣದಲ್ಲಿ ಸಿದ್ದಪಡಿಸಲಾಗಿದ್ದ ಪಿಚ್ಅನ್ನು ಮೊದಲಿನಿಂದಲೂ ಹೈವೇ ಪಿಚ್ ಎಂದು ಟೀಕಿಸಲಾಗುತ್ತಿತ್ತು. ಏಕೆಂದರೆ ಮೊದಲ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನದ ಮೂವರು ಬ್ಯಾಟರ್ಗಳಾದ, ಅಲ್ತಾಫ್, ಸೌದ್ ಹಾಗೂ ನಾಯಕ ಶಾನ್ ಮಸೂದ್ ಭರ್ಜರಿ ಶತಕಗಳನ್ನು ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇದನ್ನೇ ಲಾಭ ಪಡೆದ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಾದ ಜೋ ರೂಟ್, ಹ್ಯಾರಿ ಬ್ರೂಕ್, ಭರ್ಜರಿ ದ್ವಿಶತಕ ಹಾಗೂ ತ್ರಿಶತಕ ಸಿಡಿಸುವ ಮೂಲಕ ಆತಿಥೇಯರ ವಿರುದ್ಧ ಪ್ರಾಬಲ್ಯ ಸಾಧಿಸಿದರು.
ಬಳಿಕ ಬ್ಯಾಟಿಂಗ್ಗೆ ಇಳಿದ ಪಾಕಿಸ್ತಾನ ತಂಡವು ಎರಡನೇ ಇನ್ನಿಂಗ್ಸ್ನಲ್ಲಿ 220 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 47 ರನ್ಗಳ ಸೋಲನ್ನು ಕಾಣುವ ಮೂಲಕ 147 ವರ್ಷಗಳ ಟೆಸ್ಟ್ ಕ್ರಿಕೆಟ್ (Test Cricket) ಇತಿಹಾಸದಲ್ಲಿ ಪಾಕಿಸ್ತಾನ ಅನಪೇಕ್ಷಿತ ದಾಖಲೆಯನ್ನು ಬರೆದಿದೆ.