ನವದೆಹಲಿ: ಅಕ್ಟೋಬರ್ 09ರಂದು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟಿ20 ಸರಣಿಯ (T20 Series) ಎರಡನೇ ಪಂದ್ಯದಲ್ಲಿ ಆತಿಥೇಯರು ಪ್ರವಾಸಿಗರ ಎದುರು ಸಂಪೂರ್ಣ ಮೇಲುಗೈ ಸಾಧಿಸಿದ್ದು, ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ವಶಪಡಿಸಿಕೊಂಡಿದೆ. ಮೊದಲ ಮ್ಯಾಚ್ನಂತೆಯೇ ಎರಡನೇ ಪಂದ್ಯದಲ್ಲೂ ಎಲ್ಲಾ ವಿಭಾಗಗಳಲ್ಲೂ ಸಂಪೂರ್ಣ ಮೇಲುಗೈ ಸಾಧಿಸಿದ ಟೀಮ್ ಇಂಡಿಯಾ (Team India) ಇದನ್ನು ಮುಂದುವರೆಸಲು ಸಜ್ಜಾಗಿದೆ.
ಇತ್ತ ಭಾರತ (Team India) 86 ರನ್ಗಳ ಭರ್ಜರಿ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವ ಆಟಗಾರರಾದ ನಿತೀಶ್ ರೆಡ್ಡಿ (Nitish Reddy), ರಿಯಾನ್ ಪರಾಗ್ (Riyan Parag) ಹಾಗೂ ರಿಂಕು ಸಿಂಗ್ (Rinku Singh) ಅಂದಿನ ಸೂಪರ್ಸ್ಟಾರ್ಗಳೆಂದರೆ ತಪ್ಪಾಗಲಾರದು. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಈ ಆಟಗಾರರು ಸಂಪೂರ್ಣ ಮೇಲುಗೈ ಸಾಧಿಸಿದರು. ಆದರೆ, ಅಂದಿನ ದಿನ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ಯಾಕೆ ಮಾಡಲಿಲ್ಲ ಎಂಬ ಬಗ್ಗೆ ಹಲವರು ಪ್ರಶ್ನಿಸಿದ್ದರು, ಈ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಉತ್ತರಿಸಿದ್ದು, ಕಾರಣವನ್ನು ನೀಡಿದ್ದಾರೆ.
ಇದನ್ನೂ ಓದಿ: ಬೈರುತ್ ಮೇಲೆ Israel ವೈಮಾನಿಕ ದಾಳಿ; 22 ಮಂದಿ ಸಾವು, ಹಲವರು ಗಂಭೀರ
ಯಾವಾಗಲೂ ನಾನು ಮಧ್ಯಮಕ್ರಮಾಂಕದ ಬ್ಯಾಟರ್ಗಳು ಒತ್ತಡದಲ್ಲಿ ಹಾಗೂ ತಮ್ಮ ಅಭಿವ್ಯಕ್ತಿ ತಿಳಿಸಲು ಬ್ಯಾಟ್ ಮಾಡಲೆಂದು ನಾನು ಬಯಸುತ್ತೇನೆ. ರಿಂಕು ಮತ್ತು ನಿತೀಶ್ ಆಡಿದ ರೀತಿ ನನಗೆ ತುಂಬಾ ಖುಷಿ ನೀಡಿದೆ. ಅವರು ನನಗೆ ಬೇಕಾದಂತೆ ನಿಖರವಾಗಿ ಬ್ಯಾಟ್ ಮಾಡಿದರು. ವಿವಿಧ ಸಂದರ್ಭಗಳಲ್ಲಿ ವಿಭಿನ್ನ ಬೌಲರ್‌ಗಳು ಏನು ಮಾಡಬಹುದು ಎಂಬುದನ್ನು ನೋಡಲು ನಾನು ಬಯಸುತ್ತೇನೆ. ಕೆಲವೊಮ್ಮೆ ಹಾರ್ದಿಕ್ ಬೌಲಿಂಗ್ ಮಾಡುವುದಿಲ್ಲ, ಕೆಲವೊಮ್ಮೆ ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡುವುದಿಲ್ಲ. ಬೌಲರ್‌ಗಳು ಎದುರಾಳಿಗಳನ್ನು ಕಟ್ಟಿಹಾಕಿದ ರೀತಿ ನನಗೆ ತುಂಬಾ ಸಂತೋಷವಾಗಿದೆ ಎಂದು ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಹೇಳಿದ್ದಾರೆ.
ಸರಣಿಯ ಮೂರನೇ ಪಂದ್ಯವು ಅಕ್ಟೋಬರ್ 12ರಂದು ಹೈದರಾಬಾದ್ನಲ್ಲಿ (Hydrebad) ನಡೆಯಲಿದ್ದು, ಪ್ರವಾಸಿ ತಂಡವನ್ನು ಸಂಪೂರ್ಣ ವೈಟ್ವಾಷ್ ಮಾಡಬೇಕೆಂಬ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದೆ. ಪಾಕಿಸ್ತಾನದ (Pakistan) ಎದುರು ಗೆದ್ದು ಸಂಪೂರ್ಣ ವಿಶ್ವಾದಲ್ಲಿದ್ದ ಬಾಂಗ್ಲಾದೇಶವು (Bangladesh) ಭಾರತದ (Team India)ಎದುರು ಹೀನಾಯವಾಗಿ ಸೋಲುಂಡಿದ್ದು, ವೈಟ್ವಾಷ್ ಭೀತಿ ತಪ್ಪಿಸುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದೆ.