

ಮೈಸೂರು: ನಾಡಹಬ್ಬ ದಸರಾ ಹಿನ್ನೆಯಲ್ಲಿ ಸಾಂಸ್ಕೃತಿಕ ನಗರಿ(Cultural City) ಮೈಸೂರು ಈಗಾಗಲೇ ಸಂಭ್ರಮದಲ್ಲಿ ಮಿಂದಿದ್ದು, ದಸರಾದ (Mysore Dasara) ನಡುವೆಯೇ ರಾಜಮನೆತನಕ್ಕೆ (Royal Dynasty) ಮತ್ತೊಂದು ಸಿಹಿ ಸುದ್ದಿ (Good News) ಲಭಿಸಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಹಾಗೂ ಪತ್ನಿ ತ್ರಿಷಿಕಾ (Trishika) ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ.
ಆಯುಧ ಪೂಜೆ ದಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ಎರಡನೇ ಮಗುವಿಗೆ ತಂದೆಯಾಗಿದ್ದು, ರಾಣಿ ತ್ರಿಷಿಕಾ ಕುಮಾರಿ (Trishika Kumari) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.
ದಸರಾ (Mysore Dasara) ಹಿನ್ನೆಲೆಯಲ್ಲಿ ಅರಮನೆಯಲ್ಲಿ ಈಗಾಗಲೇ ಸಂಭ್ರಮ ಮನೆ ಮಾಡಿದ್ದು, ಇದೀಗ ಯದುವೀರ್ ದಂಪತಿಗೆ ಎರಡನೇ ಮಗು ಜನಿಸಿರುವುದು ಖುಷಿಯನ್ನು ದುಪ್ಪಟ್ಟುಗೊಳಿಸಿದೆ. ಇನ್ನು, ಯದುವೀರ್ ಅವರಿಗೆ ತ್ರಿಷಿಕಾ ಕುಮಾರಿ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಹಬ್ಬದ ದಿನವೇ ಈಗ ಈ ದಂಪತಿ ಮತ್ತೊಂದು ಮಗುವನ್ನು ಬರಮಾಡಿಕೊಂಡಿದ್ದಾರೆ.
ಮೈಸೂರಿನ ಇತಿಹಾಸದ (Mysore History) ಪ್ರಕಾರ, ಮಹಾರಾಜರಿಗೆ ಅಲುಮೇಲಮ್ಮ (Alumelamma) ಎಂಬುವವರು ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ಮಹಾರಾಜರಿಗೆ ಮಕ್ಕಳಾಗದಿರಲಿ ಎಂಬ ಶಾಪವನ್ನು ನೀಡಿರುತ್ತಾಳೆ. ಅದರಂತೆಯೇ ಮೈಸೂರು ಮಹಾರಾಜರಿಗೆ ಮಕ್ಕಳಾಗದೆ ದತ್ತು ಮಕ್ಕಳನ್ನು ಪಡೆದು ರಾಜರು ಪಟ್ಟಾಭಿಷೇಕವನ್ನು ಮಾಡಿಸಿರುವುದನ್ನು ನಾವು ನೋಡಿರುತ್ತೇವೆ. ಕೃಷ್ಣದತ್ತ ಒಡೆಯರ್ ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಒಡೆಯರ್ (Yaduveer Krishnadatta Chamaraja Wadiyar) ಅವರನ್ನು ದತ್ತು ಪಡೆದಿದ್ದರು.
ಅಲಮೇಲಮ್ಮನ ಶಾಪ ನಿವಾರಣೆಗಾಗಿ ಮೈಸೂರು ಮಹಾರಾಜರು ಚಿನ್ನದ ಮೂರ್ತಿಯನ್ನು ಮಾಡಿ ಅದಕ್ಕೆ ನವರಾತ್ರಿ (Navratri) ಹಬ್ಬದಲ್ಲಿ ಪೂಜೆಯನ್ನು ಸಲ್ಲಿಸುತ್ತಿರುವ ಪದ್ಧತಿಯನ್ನು ಸಹ ಇನ್ನೂ ಮುಂದುವರಿಸಿಕೊಂಡು ಬಂದಿದ್ದಾರೆ. ತ್ರಿಷಿಕಾ ಕುಮಾರಿಯವರು ಇನ್ನೊಂದು ಮಗುವಿಗೆ ಜನ್ಮ ನೀಡಿರುವುದು ನೋಡಿದರೆ ಅಲುಮೇಲಮ್ಮನ ಶಾಪ ನಿವಾರಣೆಯಾಗಿರುವುದು ಕಾಣುತ್ತದೆ.