ಕಣ್ಣಾಮುಚ್ಚಾಲೆ ಆಡುವುದಕ್ಕೆ ಹೊರಟಿದ್ದಾರೆ ಅನೂಪ್​, ಧನ್ಯಾ …

Hide and Seek 4 - Final
Published on

ಬೆಂಗಳೂರು: ಆರ್​. ಚಂದ್ರು ನಿರ್ದೇಶನದ 'ಲಕ್ಷ್ಮಣ' ಚಿತ್ರದ ಮೂಲಕ ಚಂದನವಕ್ಕೆ ಎಂಟ್ರಿ ಕೊಟ್ಟವರು ಮಾಜಿ ಸಚಿವ ಎಚ್​.ಎಂ. ರೇವಣ್ಣ ಅವರ ಮಗ ಅನೂಪ್​ ರೇವಣ್ಣ. 'ಲಕ್ಷ್ಮಣ' ನಂತರ ಅವರು ಸದ್ದಿಲ್ಲದೆ ಈಗ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ಅದೇ 'ಹೈಡ್​ ಅಂಡ್​ ಸೀಕ್​'. ಈ ಕಣ್ಣಾಮುಚ್ಚಾಲೆಯಾಟದಲ್ಲಿ ಡಾ. ರಾಜ್​ ಮೊಮ್ಮಗಳು ಧನ್ಯಾ ರಾಮ್​ ಕುಮಾರ್​ ಸಹ ಸೇರಿಕೊಂಡಿದ್ದಾರೆ.

ಅಂದಹಾಗೆ, 'ಹೈಡ್​ ಅಂಡ್​ ಸೀಕ್​' ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯವಾಗಿದೆ. ಇತ್ತೀಚೆಗೆ ಅನೂಪ್ ರೇವಣ್ಣ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ನಾಯಕನಿಗೆ ಶುಭ ಕೋರಿದ್ದಾರೆ.

ಅಂದಹಾಗೆ, ಈ ಚಿತ್ರವನ್ನು ಪುನೀತ್ ನಾಗರಾಜು ನಿರ್ದೇಶನ ಮಾಡಿದ್ದಾರೆ. ಇನ್ನು, ಪುನೀತ್ ನಾಗರಾಜು ಮತ್ತು ವಸಂತ್ ರಾವ್ ಎಂ.ಕುಲಕರ್ಣಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ಥ್ರಿಲ್ಲರ್​ ಚಿತ್ರವಾಗಿದ್ದು, ರಿಜೋ ಪಿ ಜಾನ್ ಛಾಯಾಗ್ರಾಹಣ, ಸ್ಯಾಂಡಿ ಅದ್ದಾನ್ಕಿ ಸಂಗೀತ ಈ ಚಿತ್ರಕ್ಕಿದೆ. ಸದ್ಯ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿರುವ ಈ ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಅಂದಹಾಗೆ, 'ಹೈಡ್​ ಅಂಡ್​ ಸೀಕ್​' ಚಿತ್ರವಲ್ಲದೆ, ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ದಲ್ಲೂ ಅನೂಪ್ ರೇವಣ್ಣ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net