'ಕಾಟೇರ' ಚಿತ್ರದಲ್ಲಿ ಮಾಲಾಶ್ರೀ ಮಗಳು ಹೀಗೆ ಕಾಣ್ತಾರೆ ನೋಡಿ …

Katera - Radhana Ram
Published on

ಬೆಂಗಳೂರು: ತರುಣ್ ಸುಧೀರ್​ ನಿರ್ದೇಶನದ 'ಕಾಟೇರ' ಚಿತ್ರದ ಮೂಲಕ ಮಾಲಾಶ್ರೀ ಮತ್ತು ರಾಮು ಮಗಳು ರಾಧನಾ ರಾಮ್​ ಅಭಿನಯಿಸುತ್ತಿರುವ ವಿಷಯ ಗೊತ್ತೇ ಇದೆ. ಆದರೆ, ಆ ಚಿತ್ರದಲ್ಲಿ ಅವರ ಪಾತ್ರವೇನು? ಅವರು ಹೇಗೆ ಕಾಣುತ್ತಾರೆ? ಎಂಬ ವಿಷಯವನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ.

ಈಗ ಈ ವಿಷಯವನ್ನು ಸ್ವತಃ ರಾಧನಾ ರಾಮ್​ ಸ್ವತಃ ಬಹಿರಂಗಪಡಿಸಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ರಾಧನಾ ತಮ್ಮ ಸೋಷಿಯಲ್​ ಮೀಡಿಯಾ ಖಾತೆಗಳ ಮೂಲಕ ತಮ್ಮ ಫಸ್ಟ್​ ಲುಕ್​ ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿ ರಾಧನಾ ಲಂಗ-ದಾವಣಿಯಲ್ಲಿ ಕಾಣಿಸಿಕೊಂಡಿದ್ದು, ಒಂದು ಕೈಯಲ್ಲಿ ಕತ್ತಿ ಹಿಡಿದಿದ್ದರೆ, ಇನ್ನೊಂದು ಕೈಯಲ್ಲಿ ಲೇಖಕ್​ ಪುಸ್ತಕಗಳನ್ನು ಹಿಡಿದಿದ್ದಾರೆ. ಈ ಚಿತ್ರದಲ್ಲಿ ರಾಧನಾ, ಪ್ರಭಾವತಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಅವರು, 'ಇದು 'ಕಾಟೇರ' ಚಿತ್ರದಲ್ಲಿನ ಫಸ್ಟ್​ ಲುಕ್​. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಇರಲಿ ...' ಎಂದು ಹೇಳಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನಾಧರಿಸಿದೆ ಎಂದು ಹೇಳಲಾಗುತ್ತಿದೆ.

'ಕಾಟೇರ' ಚಿತ್ರವನ್ನು ರಾಕ್​ಲೈನ್​ ವೆಂಕಟೇಶ್​ ನಿರ್ಮಿಸುತ್ತಿದ್ದು, ವಿ. ಹರಿಕೃಷ್ಣ ಅವರ ಸಂಗೀತ, ಸುಧಾಕರ್​ ರಾಜ್​ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net