More

    ಬೃಂದಾ ಆಚಾರ್ಯ ಈಗ ಶಿವಾನಿ; ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರಕ್ಕೆ ಸೇರ್ಪಡೆ

    ಬೆಂಗಳೂರು: ‘ಡಾರ್ಲಿಂಗ್​’ ಕೃಷ್ಣ ಅಭಿನಯದಲ್ಲಿ ಶಶಾಂಕ್​, ‘ಕೌಸಲ್ಯಾ ಸುಪ್ರಜಾ ರಾಮ’ ಎಂಬ ಹೊಸ ಚಿತ್ರ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಕಳೆದ ವರ್ಷವೇ ಈ ಚಿತ್ರ ಪ್ರಾರಂಭವಾಗಿತ್ತು. ಆದರೆ, ಈ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿರಲಿಲ್ಲ. ಈಗ ‘ಪ್ರೇಮಂ ಪೂಜ್ಯಂ’ ಖ್ಯಾತಿಯ ಬೃಂದಾ ಆಚಾರ್ಯ ನಾಯಕಿಯಾಗಿ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ.

    ಇದನ್ನೂ ಓದಿ: ಸಿನಿಸ್ಟಾರ್‌ಗಳ ರಾಜ‘ಕಾರಣ’: ಜನಪ್ರಿಯತೆಯೇ ಬಂಡವಾಳ!

    ‘ಕೌಸಲ್ಯಾ ಸುಪ್ರಜಾ ರಾಮ’ ಎಂಬ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರೆ ಎಂದು ಶಶಾಂಕ್​ ಮೊದಲೇ ಹೇಳಿದ್ದರು. ಈ ಪೈಕಿ ಒಬ್ಬ ನಾಯಕಿಯಾಗಿ ಮಿಲನಾ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಇದೆ. ಈ ಬಗ್ಗೆ ಚಿತ್ರತಂಡದವರು ಅಧಿಕೃತ ಘೋಷಣೆ ಮಾಡದಿದ್ದರೂ, ಈ ಚಿತ್ರಕ್ಕೆ ಮಿಲನಾ ಬಹುತೇಕ ನಾಯಕಿಯಾಗುವ ಸಾಧ್ಯತೆ ಇದೆ.

    ಈಗ ಈ ಚಿತ್ರದ ಇನ್ನೊಬ್ಬ ನಾಯಕಿಯಾಗಿ ಬೃಂದಾ ಸೇರ್ಪಡೆಯಾಗಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರು ಶಿವಾನಿಯಂತೆ. ಆದರೆ, ಅವರ ಪಾತ್ರವೇನು? ಅವರಿಲ್ಲಿ ಏನು ಮಾಡುತ್ತಾರೆ? ಎಂಬ ವಿಷಯವನ್ನು ಚಿತ್ರತಂಡ ಗೌಪ್ಯವಾಗಿಯೇ ಇಟ್ಟಿದೆ.

    ಇದೊಂದು ತಾಯಿ-ಮಗ ನಡುವಿನ ಭಾವನಾತ್ಮಕ ಚಿತ್ರವಾಗಿದ್ದು, ನಾಯಕನಾಗಿ ‘ಡಾರ್ಲಿಂಗ್​’ ಕೃಷ್ಣ, ತಾಯಿಯ ಪಾತ್ರದಲ್ಲಿ ಸುಧಾ ಬೆಳವಾಡಿ, ತಂದೆಯ ಪಾತ್ರದಲ್ಲಿ ರಂಗಾಯಣ ರಘು ನಟಿಸುತ್ತಿದ್ದಾರೆ. ಜತೆಗೆ ಅಚ್ಯುತ್​ ಕುಮಾರ್​, ಗಿರಿರಾಜ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಇದನ್ನೂ ಓದಿ: ‘ಜವಾನ್​’ ಜತೆಗೆ ಸಂಜಯ್​ ದತ್​; ಶಾರುಖ್​ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟನೆ

    ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರವನ್ನು ಶಶಾಂಕ್​ ಸಿನಿಮಾಸ್​ ಹಾಗೂ ಸಚಿವ ಬಿ.ಸಿ. ಪಾಟೀಲ್​ ಅವರ ಕೌರವ ಪ್ರೊಡಕ್ಷನ್ಸ್​ ಜಂಟಿಯಾಗಿ ನಿರ್ಮಿಸುತ್ತಿವೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಅರ್ಜುನ್​ ಜನ್ಯ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ಸುಜ್ಞಾನ್​ ಛಾಯಾಗ್ರಹಣ, ಗಿರಿ ಮಹೇಶ್​ ಸಂಕಲನ ಇರಲಿದೆ.

    ಹೊಸ ಚಿತ್ರದಲ್ಲಿ ಶಿವರಾಜಕುಮಾರ್​ ಜತೆಯಾದ ಗಣೇಶ್​; ಸದ್ಯದಲ್ಲೇ ಪ್ರಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts