

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ವಿವಿಧ ರಾಜ್ಯಗಳ 36 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕದ ಆ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪ್ರಕಟಿಸಲಾಗಿದೆ.
ಕರ್ನಾಟಕದಲ್ಲಿ 28ಕ್ಷೇತ್ರಗಳಿದ್ದು 5ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಬಿಜಾಪುರ ಎಸ್ಸಿ ಕ್ಷೇತ್ರಕ್ಕೆ ಎಚ್.ಆರ್.ಆಲ್ಗೂರ್(ರಾಜು), ಶಿವಮೊಗ್ಗ - ಗೀತಾಶಿವರಾಜ್ ಕುಮಾರ್, ಹಾಸನ-ಎಂಶ್ರೇಯಸ್ ಪಟೇಲ್, ತುಮಕೂರು-ಎಸ್.ಪಿ.ಮುದ್ದಹನುಮೇಗೌಡ, ಮಂಡ್ಯ-ವೆಂಕಟರಾಮೇಗೌಡ(ಸ್ಟಾರ್ ಚಂದ್ರು) ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಗುರುವಾರ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಪಿ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ನೇತೃತ್ವದಲ್ಲಿ ಪಕ್ಷದ ‘ಕೇಂದ್ರ ಚುನಾವಣಾ ಸಮಿತಿ’ ಸಭೆ ನಡೆಸಿ ಕರ್ನಾಟಕ, ತೆಲಂಗಾಣ, ದೆಹಲಿ, ಕೇರಳ, ಹರಿಯಾಣ, ತ್ರಿಪುರ, ಸಿಕ್ಕಿಂ, ಮೇಘಾಲಯ ಮತ್ತು ಮಣಿಪುರ. ರಾಜ್ಯಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕುರಿತು ಚರ್ಚೆ ನಡೆಸಿತು. ರಾಹುಲ್ ಗಾಂಧಿ ಹಾಜರಿದ್ದರು.