ಜೆಎನ್‌ಯು ಕ್ಯಾಂಪಸ್​ನಲ್ಲಿ ನಗ್ನವ್ಯಕ್ತಿ ಪ್ರತ್ಯಕ್ಷ..ವಿವಿ ಹೇಳಿದ್ದೇನು?

jnu
Published on

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ(ಜೆಎನ್‌ಯು) ಕ್ಯಾಂಪಸ್‌ನಲ್ಲಿ ವ್ಯಕ್ತಿಯೊಬ್ಬ ನಗ್ನವಾಗಿ ಕಾಣಿಸಿಕೊಂಡು, ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜಾಗರೂಕರಾಗಿರಲು ಆಡಳಿತ ಸಲಹೆ ನೀಡಿದೆ.

ಜೆಎನ್‌ಯು ಆಡಳಿತ ಬ್ಲಾಕ್‌ನ ಪಕ್ಕದ ಬಸ್ ನಿಲ್ದಾಣದ ಬಳಿ ಅಪರಿಚಿತ ಬಟ್ಟೆಗಳನ್ನು ಬಿಚ್ಚಿ ಅನುಚಿತ ವರ್ತನೆಯಲ್ಲಿ ತೊಡಗಿದ್ದು, ವಿದ್ಯಾರ್ಥಿಗಳು ಭಯಭೀತರಾಗಿದ್ದರು. ಹೆಣ್ಣು ಮಕ್ಕಳಂತೂ ಕಣ್ಣುಮುಚ್ಚಿಕೊಂಡು ಸಂಚರಿಸಬೇಕಾಯಿತು. ಇನ್ನು ಕೆಲವರು ಆ ಮಾರ್ಗದಲ್ಲಿ ವಾಪಸ್​ ಹೋಗುತ್ತಿದ್ದ ದೃಶ್ಯ ಗುರುವಾರ ಸಾಮಾನ್ಯವಾಗಿತ್ತು.

ಅಪರಿಚಿತನನ್ನು ವಿವಸ್ತ್ರಗೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಗಮನಿಸಿದ್ದಾರೆ. ಆತ ಮಹಿಳೆಯರನ್ನು ತದೇಕಚಿತ್ತದಿಂದ ದಿಟ್ಟಿಸುತ್ತ ಅಶ್ಲೀಲ ವರ್ತನೆಯಲ್ಲಿ ತೊಡಗಿದ್ದ. ಇದು ಭದ್ರತಾ ಶಾಖೆಯ ಗಮನಕ್ಕೆ ಬಂದಿದೆ. ವಿಶ್ವವಿದ್ಯಾಲಯವು ಇದನ್ನು ತೀವ್ರ ಖಂಡನೆ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿದೆ. ಈ ಆಕ್ರಮಣಕಾರಿ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ" ಎಂದು ಪ್ರತಿಪಾದಿಸಿದೆ.

ಇದೊಂದು ದುರಾದೃಷ್ಟಕರ ನಡುವಳಿಕೆಯಾಗಿದೆ. ಇಂತಹ ನಡವಳಿಕೆ ನಮ್ಮ ಗಮನಕ್ಕೆ ಬಂದ ತಕ್ಷಣ, ಅಸಭ್ಯ ವರ್ತನೆ ತೋರಿದ ವ್ಯಕ್ತಿಯನ್ನು ಗುರುತಿಸಿ ಕ್ರಮ ಕೈಗೊಳ್ಳಲು ಅಗತ್ಯ ಕ್ರಮಗಳನ್ನು ಪ್ರಾರಂಭಿಸಿದೆ ಜೆಎನ್​ಯು ಆಡಳಿತ ಹೇಳಿಕೆಯಲ್ಲಿ ತಿಳಿಸಿದೆ.

ಕಾನೂನು ಜಾರಿ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯದ ಆಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಲಿದೆ. ವಿದ್ಯಾರ್ಥಿಗಳು ಜಾಗರೂಕರಾಗಿರಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ವ್ಯಕ್ತಿಯನ್ನು ಕಂಡ ಕೂಡಲೇ ಭದ್ರತಾ ಶಾಖೆಗೆ ತಿಳಿಸಲು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net