More

    ‘ಭಾರತ ಹೆಲಿಕಾಪ್ಟರ್​, ಸಿಬ್ಬಂದಿ ಮೇಲೆ ಇನ್ನು ನಮ್ಮದೇ ನಿಯಂತ್ರಣ’: ಮಾಲ್ಡೀವ್ಸ್​

    ಮಾಲೆ: ಚೀನಾದ ತೆಕ್ಕೆಗೆ ಸೇರುತ್ತಿರುವ ಮಾಲ್ಡೀವ್ಸ್ ಭಾರತ ವಿರೋಧಿ ಧೋರಣೆಯನ್ನು ತೀವ್ರಗೊಳಿಸುತ್ತಿದೆ. ಈಗಾಗಲೇ ಭಾರತೀಯ ಸೈನಿಕರನ್ನು ತನ್ನ ಪ್ರದೇಶದಿಂದ ಕಳುಹಿಸಲು ನಿರ್ಧರಿಸಿದ್ದು, ಇತ್ತೀಚೆಗಷ್ಟೇ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ‘ಮಾಲ್ಡೀವ್ಸ್ ನ್ಯಾಷನಲ್ ಡಿಫೆನ್ಸ್ ಫೋರ್ಸ್ (ಎಂಎನ್‌ಡಿಎಫ್)’ ಭಾರತದಿಂದ ಸರಬರಾಜು ಮಾಡಲಾದ ಹೆಲಿಕಾಪ್ಟರ್ ಮತ್ತು ಅದರ ಸಿಬ್ಬಂದಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವುದಾಗಿ ಘೋಷಿಸಿದೆ.

    ಇದನ್ನೂ ಓದಿ: ಡಿಆರ್​ಎ ಅಧಿಕಾರಿಗಳ ಭರ್ಜರಿ ಬೇಟೆ: ಚಿನ್ನ ಕಳ್ಳಸಾಗಣೆ ಜಾಲ ಪತ್ತೆ – 10.5 ಕೋಟಿ ರೂ.ಮೌಲ್ಯದ ಚಿನ್ನ ವಶ!

    ಎಂಎನ್‌ಎಫ್‌ಎಲ್‌ನ ‘ಯೋಜನೆಗಳು, ನೀತಿ ಮತ್ತು ಸಂಪನ್ಮೂಲಗಳ ಇಲಾಖೆ’ ನಿರ್ದೇಶಕ ಕರ್ನಲ್ ಅಹ್ಮದ್ ಮುಜುತಾಬಾ ಮೊಹಮ್ಮದ್, ಭಾರತೀಯ ಪಡೆಗಳನ್ನು ಹಿಂತೆಗೆದುಕೊಳ್ಳುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.

    ಮೇ 10 ರ ನಂತರ ಮಾಲ್ಡೀವ್ಸ್ ಭೂಪ್ರದೇಶದಲ್ಲಿ ಯಾವುದೇ ವಿದೇಶಿ ಪಡೆಗಳಿಗೆ ಅವಕಾಶವಿಲ್ಲ ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಆದೇಶ ನೀಡಿರುವುದನ್ನು ನೆನಪಿಸಿಕೊಳ್ಳಲಾಗಿದೆ. ಮತ್ತೊಂದೆಡೆ, ಮಾಲ್ಡೀವ್ಸ್‌ಗೆ ಹಸ್ತಾಂತರಿಸಲಾದ ಹೆಲಿಕಾಪ್ಟರ್ ಅನ್ನು ನಿರ್ವಹಿಸುವ ಮಿಲಿಟರಿ ಸಿಬ್ಬಂದಿಯನ್ನು ಬದಲಿಸಲು ತಜ್ಞರ ತಂಡವನ್ನು ಕಳುಹಿಸಲಾಗಿದೆ ಎಂದು ಭಾರತ ಕಳೆದ ವಾರ ಘೋಷಿಸಿತು.

    ಈ ಹಿಂದೆ ನಡೆದ ಚುನಾವಣೆಯಲ್ಲಿ ಚೀನಾ ಪರವಿದ್ದ ಮುಯಿಜ್ಜು ಭಾರತದ ಪರವಿದ್ದ ಮೊಹಮ್ಮದ್ ಸೋಲಿ ಅವರನ್ನು ಸೋಲಿಸಿದರು. ಪ್ರಚಾರದ ವೇಳೆ ನೀಡಿದ ಭರವಸೆಯಂತೆ ಭಾರತೀಯ ಪಡೆಗಳನ್ನು ತಾನು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ತಮ್ಮ ಪ್ರದೇಶದಿಂದ ಹಿಂದೆ ಸರಿಸುವುದಾಗಿ ಘೋಷಿಸಿ ವಿವಾದ ಹುಟ್ಟಿಕೊಳ್ಳಲು ಕಾರಣರಾಗಿದ್ದ ಮುಯಿಜ್ಜು ಭಾರತದೊಂದಿಗೆ ಸಹಿ ಹಾಕಲಾದ 100 ಒಪ್ಪಂದಗಳನ್ನು ಪರಿಶೀಲಿಸಲಾಗುವುದು ಎಂದು ಇತ್ತೀಚೆಗೆ ಘೋಷಿಸಿದ್ದರು.

    ಚೀನಾಕ್ಕೆ ಹತ್ತಿರವಾಗಲು ಮುಯಿಜ್ಜು ತಯಾರಿ ನಡೆಸಿಕೊಂಡಿದ್ದಾರೆ. ಗ್ಯಾಸ್ ಬಾಲ್ ಮತ್ತು ಪೆಪ್ಪರ್ ಸ್ಪ್ರೇಯಂತಹ ಮೂಲ ಶಸ್ತ್ರಾಸ್ತ್ರಗಳನ್ನು ಉಚಿತವಾಗಿ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನು ತನ್ನ ದೇಶದ ಸೈನಿಕರಿಗೆ ತರಬೇತಿ ನೀಡುವುದಾಗಿ ಸ್ವತಃ ಮುಯಿಜ್ಜು ಘೋಷಿಸಿದ್ದಾರೆ. ಮತ್ತೊಂದೆಡೆ, ಚೀನಾದ ಸಂಶೋಧನಾ ನೌಕೆಯು ರಾಜಧಾನಿ ಮಾಲೆ ಬಳಿ ಒಂದು ವಾರದವರೆಗೆ ಬೀಡುಬಿಡಲಿದೆ ಎನ್ನಲಾಗಿದೆ.

    ‘ಆ ಗಾಯ ವಾಸಿಯಾಗಲು ಸಮಯ ಬೇಕು’..ಸಮಂತಾ ಮನದಾಳದ ಮಾತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts