More

    ಡಿಆರ್​ಎ ಅಧಿಕಾರಿಗಳ ಭರ್ಜರಿ ಬೇಟೆ: ಚಿನ್ನ ಕಳ್ಳಸಾಗಣೆ ಜಾಲ ಪತ್ತೆ – 10.5 ಕೋಟಿ ರೂ.ಮೌಲ್ಯದ ಚಿನ್ನ ವಶ!

    ಮುಂಬೈ: ಚಿನ್ನವನ್ನು ಕಳ್ಳಸಾಗಣೆ ಮಾಡಿ ಗ್ರೇ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಮುಂಬೈನ ವಿವಿಧೆಡೆ ದಾಳಿ ನಡೆಸಿ 10.48 ಕೋಟಿ ರೂ.ಮೌಲ್ಯದ 16.47 ಕೆಜಿ ವಿದೇಶಿ 6 ಕೆಜಿ ಬೆಳ್ಳಿ ಮತ್ತು 2.65 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ‘ಆ ಗಾಯ ವಾಸಿಯಾಗಲು ಸಮಯ ಬೇಕು’..ಸಮಂತಾ ಮನದಾಳದ ಮಾತು!

    ವಿದೇಶಗಳಿಂದ ಚಿನ್ನ ಕಳ್ಳಸಾಗಾಣೆ ಮಾಡಿ ದೇಶದ ವಿವಿಧೆಡೆ ಮಾರಾಟಮಾಡುತ್ತಿದ್ದ ಬೃಹತ್​ ಜಾಲದ ಮಾಸ್ಟರ್‌ಮೈಂಡ್‌ಗಳು ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ.

    ಡಿಆರ್‌ಐ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರಗೆ ಜಾಲದ ಇಬ್ಬರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದಾಗ ತಂಡದ ಹ್ಯಾಂಡ್ಲರ್ ಪತ್ತೆಯಾಗಿದ್ದು, ಆತನ ಮನೆಯಲ್ಲಿ ಶೋಧ ನಡೆಸಿದಾಗ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 3.77 ಕೆಜಿ ಚಿನ್ನ ಮತ್ತು ಮಾರಾಟ ಮಾಡಿ ಬಂದಿದ್ದ 60 ಲಕ್ಷ ರೂ.ಪತ್ತೆಯಾಗಿತ್ತು.

    “ವಿಚಾರಣೆಯ ಸಮಯದಲ್ಲಿ ಮಾಸ್ಟರ್ ಮೈಂಡ್ ತನ್ನ ಫೋನ್ ಮತ್ತು ಎರಡು ವಿದೇಶಿ ಮೂಲದ ಚಿನ್ನದ ಬಾರ್​ಗಳನ್ನು ತನ್ನ ಮಹಡಿ ಮನೆಯಿಂದ ಹೊರಕ್ಕೆ ಎಸೆದಿದ್ದ. ಆದರೆ 15 ಗಂಟೆಗಳ ಶೋಧದ ನಂತರ 3 ಮೊಬೈಲ್ ಫೋನ್​ಗಳು ಮತ್ತು 1 ಕೆಜಿಯ 2 ವಿದೇಶಿ ಮೂಲದ ಚಿನ್ನದ ಬಾರ್​ಗಳು, ಹೌಸಿಂಗ್ ಸೊಸೈಟಿಗಳ ಇಬ್ಬರು ನಿವಾಸಿಗಳಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.

    ಮಾಸ್ಟರ್‌ಮೈಂಡ್‌ನ ಪತ್ನಿಯೂ ತಂಡದ ಸಕ್ರಿಯ ಸದಸ್ಯೆಯಾಗಿದ್ದು, ಪರಾರಿಯಾಗಲು ಯತ್ನಿಸಿದ ಆಕೆಯನ್ನು ಬಂಧಿಸಲಾಗಿದೆ. ಬಳಿಕ ಆಕೆಯ ಸಹಚರರ ಮನೆಯಲ್ಲಿ ಹೆಚ್ಚಿನ ಶೋಧ ನಡೆಸಲಾಗಿದ್ದು, 6 ಕೆಜಿ ಬೆಳ್ಳಿ ಹಾಗೂ ರೂ. 25 ಲಕ್ಷ ನಗದು ಪತ್ತೆಯಾಗಿದೆ.

    ಅಧಿಕಾರಿಗಳು ಆರು ಮಂದಿಯನ್ನು ಬಂಧಿಸಿ ಒಟ್ಟು 10.48 ಕೋಟಿ ರೂ. ಮೌಲ್ಯದ, 16.47 ಕೆಜಿ ಚಿನ್ನ, 6 ಕೆಜಿ ಬೆಳ್ಳಿ ಮತ್ತು ರೂ. 2.65 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.

    ಹಿಮಾಚಲ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಲಿರುವ ಸಿಎಂ ಸುಖು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts