More

    ರಾಹುಲ್​ಗಾಂಧಿ ಅಮೇಠಿ ಬಿಟ್ಟು ವಯನಾಡ್​ನಿಂದ ಸ್ಪರ್ಧಿಸುವುದೇಕೆ? ಬಿಜೆಪಿ ಹೇಳಿದ ಕಾರಣ ಹೀಗಿದೆ..

    ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡಿನಿಂದ ಸ್ಪರ್ಧಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿರ್ಧಾರವನ್ನು ಬಿಜೆಪಿ ಟೀಕಿಸಿದೆ. ರಾಹುಲ್ ಅಮೇಠಿಯಿಂದ ಏಕೆ ಸ್ಪರ್ಧಿಸುತ್ತಿಲ್ಲ? ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ರಾಜಕೀಯವನ್ನು ಆಧರಿಸಿರುವುದರಿಂದ ರಾಹುಲ್ ವಯನಾಡಿನಿಂದ ಸ್ಪರ್ಧಿಸಲು ಬಯಸಿದ್ದಾರೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

    ರಾಹುಲ್ ಗಾಂಧಿ ಕಾಂಗ್ರೆಸ್‌ ಗೆ ಜನಬೆಂಬಲವಿದೆ ಎನ್ನುತ್ತಾರೆ. ಹಾಗಾದರೆ ಅವರು ಅಮೇಠಿಯಿಂದ ಏಕೆ ಸ್ಪರ್ಧಿಸುತ್ತಿಲ್ಲ? ಅದಕ್ಕೆ ಕಾರಣವಿಲ್ಲದಿಲ್ಲ. ವಯನಾಡಿನಲ್ಲಿ ಬಹುಪಾಲು ಜನರು ಅಲ್ಪಸಂಖ್ಯಾತರು. ‘ಕಾಂಗ್ರೆಸ್ ರಾಜಕೀಯ ಅಲ್ಪಸಂಖ್ಯಾತರನ್ನು ಆಧರಿಸಿದೆ’ ಎಂದು ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಜೆಎನ್‌ಯು ಕ್ಯಾಂಪಸ್​ನಲ್ಲಿ ನಗ್ನವ್ಯಕ್ತಿ ಪ್ರತ್ಯಕ್ಷ..ವಿವಿ ಹೇಳಿದ್ದೇನು?

    ಗುರುವಾರ ನಡೆದ ಕಾಂಗ್ರೆಸ್​ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ಅಮೇಠಿಯಿಂದ ರಾಹುಲ್ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳೂ ಕೇಳಿಬರುತ್ತಿವೆ. ರಾಹುಲ್ 2004, 2009 ಮತ್ತು 2014ರಲ್ಲಿ ಅಮೇಠಿಯಿಂದ ಗೆದ್ದಿದ್ದರು. ಆದರೆ 2019ರಲ್ಲಿ ಅಮೇಥಿಯಲ್ಲಿ ಸೋಲು ಕಂಡಿದ್ದರು. ಅಮೇಠಿ ಜೊತೆಗೆ ಕೇರಳದ ವಯನಾಡಿನಲ್ಲಿ ರಾಹುಲ್ ಸ್ಪರ್ಧಿಸಿ ಗೆದ್ದಿದ್ದರು.

    ಪಕ್ಷದ ಮೂಲಗಳ ಪ್ರಕಾರ ಕಾಂಗ್ರೆಸ್ ಸಿಇಸಿ ಸಭೆಯಲ್ಲಿ 50 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಅದರಂತೆ ಕಾಂಗ್ರೆಸ್ ಸಂಸದ ಶಶಿತರೂರ್ ತಿರುವನಂತಪುರಂನಿಂದ ಮರು ಸ್ಪರ್ಧಿಸಲಿದ್ದಾರೆ. ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಹೆಸರನ್ನು ಸಹ ಅಂತಿಮಗೊಳಿಸಲಾಗಿದೆ. ಛತ್ತೀಸ್‌ಗಢದಿಂದ ಜ್ಯೋತ್ಸ್ನಾ ಮೆಹಾಂತ್ ಸ್ಪರ್ಧೆಗೂ ಹಾದಿ ಸುಗಮವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸಿಇಸಿ ಸಭೆಯಲ್ಲಿ ಭಾಗವಹಿಸಿದ್ದರೆ, ರಾಹುಲ್ ಗಾಂಧಿ ಜೂಮ್ ಮೀಟಿಂಗ್ ಮೂಲಕ ಭಾಗವಹಿಸಿದ್ದರು

    ಸಿಬಿಎಸ್​ಇ ಪ್ರಾಯೋಗಿಕ ಪರೀಕ್ಷೆ ಆಂತರಿಕ ಮೌಲ್ಯಮಾಪನ ಗಡುವು ವಿಸ್ತರಣೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts