ಹಾರ್ದಿಕ್​-ರೋಹಿತ್​ ನಡುವಿನ ಮುನಿಸು! ದೂರಾಗಲು ಕಾರಣವಾಯ್ತು ಈ ಅಂಶ

Rohit Sharma kisses Hardik Pandya
Published on

ನವದೆಹಲಿ: ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ ಈ ಬಾರಿ ರೋಹಿತ್​ ಶರ್ಮ ಹಾಗೂ ಹಾರ್ದಿಕ್​ ಪಾಂಡ್ಯ ನಡುವಿನ ಕಿತ್ತಾಟದಿಂದ ಹೆಚ್ಚು ಸದ್ದು ಮಾಡಿತ್ತು. 17ನೇ ಆವೃತ್ತಿ ಆರಂಭವಾಗುವುದಕ್ಕೂ ಮುಂಚಿನಿಂದಲೂ ಈ ಇಬ್ಬರ ನಡುವೆ ಮುಂಬೈ ಇಂಡಿಯನ್ಸ್​ ನಾಯಕತ್ವದ ವಿಚಾರವಾಗಿ ನಡೆದ ಕಿತ್ತಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಟಿ20 ವಿಶ್ವಕಪ್​ನಲ್ಲಿ ಈ ಇಬ್ಬರು ನಡುವಿನ ಮುನಿಸು ಮುಂದುವರೆಯುತ್ತದೆ ಎಂದು ಹೇಳಲಾಗಿತ್ತಾದರೂ ರೋಹಿತ್​ ಹಾಗೂ ಹಾರ್ದಿಕ್​ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರು.

ಈ ಕುರಿತು ಮಾತನಾಡಿರುವ ವಿಮಲ್​ ಕುಮಾರ್​, ಟಿ20 ವಿಶ್ವಕಪ್​ ವೇಳೆ ನಾನು ನೆಟ್ಸ್​ಗೆ ಹೋದಾಗ ಹಾರ್ದಿಕ್​ ಮತ್ತು ರೋಹಿತ್​ ನಡುವೆ ಏನು ನಡೆಯುತ್ತಿದೆ ಎಂಬುದನ್ನು ಗಮನಿಸಿದೆ. ಮೊದಲ ದಿನ ಅವರಿಬ್ಬರು ಮಾತನಾಡುವುದನ್ನು ನಾನು ನೋಡಲಿಲ್ಲ. ಎರಡನೇ ದಿನ ಇಬ್ಬರು ಸಂಬಾಷಣೆ ನಡೆಸುತ್ತಿದ್ದ ರೀತಿ ನೋಡಿ ನನಗೆ ತುಂಬಾ ಖುಷಿಯಾಯಿತು. ಆಗ ತಂಡದ ಪ್ರದರ್ಶನದ ಬಗ್ಗೆ ಸಂಪೂರ್ಣವಾಗಿ ವಿಶ್ವಾಸ ಮೂಡಿತು.

ಇದಾದ ಬಳಿಕ ನೆಟ್ಸ್​​ನಲ್ಲಿ ಜತೆಯಾಗಿ ಅಭ್ಯಾಸ ನಡೆಸುತ್ತಿದ್ದ ಈ ಇಬ್ಬರು ಆಟಗಾರರು ಒವ್ವರಿಗೊಬ್ಬರು ಸಲಹೆಗಳನ್ನು ನೀಡುತ್ತಿದ್ದರು. ಇದನ್ನು ನೋಡಿ ನನಗೆ ಸಂತಸವಾಯಿತು. ನಾನು ನೋಡಿದ ಆ ಕ್ಷಣವು ತಂಡ ಹಾಗೂ ಇವರಿಬ್ಬರ ನಡುವೆ ಎಲ್ಲವೂ ಸರಿ ಇದೆ ಎನ್ನಿಸಿತು. ತಂಡದ ಸಲುವಾಗಿ ಇವರಿಬ್ಬರು ಒಂದಾಗಿದ್ದು, ಇದರ ಸಂಪೂರ್ಣ ಕ್ರೆಡಿಟ್​ ಏನಿದ್ದರೂ ರಾಹುಲ್​ ದ್ರಾವಿಡ್​ ಅವರಿಗೆ ಸಲ್ಲುತ್ತದೆ. ಅವರು ತಂಡವನ್ನು ನಿಭಾಯಿಸಿದ ರೀತಿ ಮತ್ತು ರೋಹಿತ್​ ನಾಯಕತ್ವದ ಬಗ್ಗೆ ಎಲ್ಲರಿಗೂ ವಿಶ್ವಾಸವಿತ್ತು ಎಂದು ಪತ್ರಕರ್ತ ವಿಮಲ್​ ಕುಮಾರ್ ಹೇಳಿದ್ದಾರೆ.

ಐಪಿಎಲ್​ ಆರಂಭವಾಗುವುದಕ್ಕೂ ಮುಂಚಿನಿಂದಲೂ ರೋಹಿತ್​ ಹಾಗೂ ಹಾರ್ದಿಕ್​ ನಡುವೆ ನಾಯಕತ್ವದ ವಿಚಾರವಾಗಿ ಬಿರುಕು ಮೂಡಿತ್ತು. ಈ ಇಬ್ಬರು ಆಟಗಾರರು ಒಂದೇ ತಂಡದ ಪರ ಆಡಿದರು ಪರಸ್ಪರ ಮಾತನಾಡಿದ್ದು ಕಂಡು ಬರಲಿಲ್ಲ. ಇಬ್ಬರ ನಡುವಿನ ಮುನಿಸು ಮುಂದಿನ ದಿನಗಳಲ್ಲೂ ಮುಂದುವರೆಯುತ್ತದೆ ಎಂದು ಹೇಳಲಾಗಿತ್ತಾದರೂ ರೋಹಿತ್​ ಹಾಗೂ ಹಾರ್ದಿಕ್​ ತಂಡದ ಸಲುವಾಗಿ ಒಂದಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net