More

    ಕಾರ್ಮಿಕರ ಗುಡಿಸಲುಗಳಿಗೆ ದುಷ್ಕರ್ಮಿಗಳಿಂದ ಬೆಂಕಿ: ಎಸ್ಸೆಸ್ಸೆಲ್ಸಿ ಮಕ್ಕಳ ಪುಸ್ತಕಗಳೂ ಭಸ್ಮ!

    ಬೆಂಗಳೂರು: ಕಾಚರಕನಹಳ್ಳಿಯ ಕೆರೆ ಬಳಿಯಿದ್ದ ಕೂಲಿ ಕಾರ್ಮಿಕರ ಗುಡಿಸಲುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಪುಸ್ತಕ, ಬಟ್ಟೆ ಹಾಗೂ ಶಾಲಾ ದಾಖಲೆಗಳು ಸುಟ್ಟು ಹೋಗಿವೆ.

    ಇದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಇದ್ದು, ಅವರಿಗೆ ಓದಲು ಪುಸ್ತಕಗಳಿಲ್ಲದಂತಾಗಿವೆ. ಇನ್ನೇನು ಪರೀಕ್ಷೆಯೂ ಬಂತು; ಅವರು ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕು ಎಂದು ಸಂತ್ರಸ್ತರು ಕಣ್ಣೀರು ಹಾಕಿದ್ದಾರೆ.

    ಇದನ್ನೂ ಓದಿ  ಟೀಕಿಸಿದವರಿಗೆ ಮಂಗಳೂರಿನ ಗಗನಸಖಿಯ ಖಡಕ್ ಪ್ರತ್ಯುತ್ತರ

    ಒಟ್ಟು ಸುಮಾರು 30 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಅಲ್ಲದೆ, 50-60 ಶೆಡ್‌ಗಳನ್ನು ದುಷ್ಕರ್ಮಿಗಳು ಕಿತ್ತು ಹಾಕಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ಊರುಗಳಿಗೆ ತೆರಳಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿದೆ.

    ಗುಡಿಸಲುಗಳಿಗೆ ಉದ್ದೇಶ ಪೂರ್ವಕವಾಗಿಯೇ ಬೆಂಕಿ ಇಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ದೂರು ದಾಖಲಿಸಿ ಆರೋಪಿಗಳ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಬಾಣಸವಾಡಿ ಉಪವಿಭಾಗದ ಎಸಿಪಿ ತಿಳಿಸಿದ್ದಾರೆ.
    ಕೆರೆ ಪ್ರದೇಶದಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ 300ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಶೆಡ್ ಹಾಕಿಕೊಂಡಿದ್ದು, ಕಳೆದ 10 ವರ್ಷಗಳಿಂದ ಇಲ್ಲಿಯೇ ವಾಸವಿದ್ದಾರೆ. ಶೆಡ್‌ಗಳ ಸಮೀಪ ಯಾವುದೇ ಮನೆಗಳಿಲ್ಲ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರೆಲ್ಲ ಊರುಗಳಿಗೆ ಹೋಗಿದ್ದರು. ಈ ನಡುವೆಯೇ ದುಷ್ಕರ್ಮಿಗಳು ಬೆಂಕಿ ಹಾಕಿ, ಕೆಲ ಶೆಡ್‌ಗಳನ್ನು ಕಿತ್ತು ಎಸೆದಿದ್ದಾರೆ.

    ರಸ್ತೆ ಸಮೀಪ ವಾಸ: ಊರುಗಳಿಗೆ ತೆರಳಿದ್ದ ಕೂಲಿಕಾರ್ಮಿಕರು ಲಾಕ್‌ಡೌನ್ ನಿಯಮ ಸಡಿಲಿಕೆಯಾದ ಹಿನ್ನೆಲೆಯಲ್ಲಿ ನಗರಕ್ಕೆ ವಾಪಸ್ ಬಂದಿದ್ದಾರೆ. ಈ ವೇಳೆ ಗುಡಿಸಲು ಸಂಪೂರ್ಣವಾಗಿ ಹಾನಿಯಾಗಿರುವುದು ಗೊತ್ತಾಗಿದೆ.
    ವಾಸಿಸಲು ಗುಡಿಸಲುಗಳಿಲ್ಲದೇ ಬೀದಿಗೆ ಬಿದ್ದಿರುವ ಕುಟುಂಬಗಳು ರಸ್ತೆ ಸಮೀಪವೇ ಅಡುಗೆ ಮಾಡಿಕೊಂಡು, ಅಲ್ಲಿಯೇ ಮಲಗತೊಡಗಿದ್ದಾರೆ. ಕರೊನಾ ಭೀತಿ ನಡುವೆ ತಮ್ಮನ್ನು ಸಂಕಷ್ಟಕ್ಕೆ ದೂಡಿರುವ ದುಷ್ಕರ್ಮಿಗಳಿಗೆ ಕೂಲಿಕಾರ್ಮಿಕರು ಹಿಡಿಶಾಪ ಹಾಕುತ್ತಿದ್ದಾರೆ.

    ಕೋಡೆಡ್ ಮೆಸೇಜ್ ಹೊತ್ತ ಪಾಕ್‌ನ ಗೂಢಚಾರಿ ಪಾರಿವಾಳ ವಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts