More

  ಕೋಡೆಡ್ ಮೆಸೇಜ್ ಹೊತ್ತ ಪಾಕ್‌ನ ಗೂಢಚಾರಿ ಪಾರಿವಾಳ ವಶ!

  ಶ್ರೀನಗರ: ಕೋಡ್‌ವರ್ಡ್ ರೀತಿಯ ಸಂದೇಶವಿದ್ದ ರಿಂಗ್‌ನ್ನು ಹೊಂದಿದ್ದ ಪಾರಿವಾಳವೊಂದನ್ನು ಜಮ್ಮು- ಕಾಶ್ಮೀರದ ಕಥುವಾ ಜಿಲ್ಲೆಯ ನಿವಾಸಿಗಳು ಅಂತಾರಾಷ್ಟ್ರೀಯ ಗಡಿ ಬಳಿ ವಶಪಡಿಸಿಕೊಂಡಿದ್ದಾರೆ.

  ಈ ಪಾರಿವಾಳಕ್ಕೆ ಪಾಕಿಸ್ತಾನ ತರಬೇತಿ ನೀಡಿ ಗೂಢಚಾರಿಕೆಗೆ ಬಳಸುತ್ತಿರುವ ಶಂಕೆ ವ್ಯಕ್ತವಾಗಿದ್ದು, ಇದನ್ನು ಪೊಲೀಸ್ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ ಎಂದು ಕಥುವಾ ಎಸ್‌ಪಿ ಶೈಲೇಂದ್ರ ಮಿಶ್ರಾ ಹೇಳಿದ್ದಾರೆ.

  ಇದನ್ನೂ ಓದಿ  ಕರೊನಾ ಹಾವಳಿಯ ಬೆನ್ನಲ್ಲೇ ಭೀಕರ ಸುನಾಮಿ ಬರುತ್ತಂತೆ!

  ಕಪ್ಪು-ಬಿಳಿ ಹಾಗೂ ರೆಕ್ಕೆಗಳ ಮೇಲೆ ಗುಲಾಬಿ ಬಣ್ಣ ಹೊಂದಿರುವ ಈ ಪಾರಿವಾಳ ಪಾಕಿಸ್ತಾನದ ಕಡೆಯಿಂದ ಹಾರುತ್ತ ಬಂದಿದ್ದು, ಅಂತಾರಾಷ್ಟ್ರೀಯ ಗಡಿಯ ಬಳಿ ಸಂಚರಿಸುತ್ತಿತ್ತು. ಅದರ ಕಾಲಿನಲ್ಲಿ ರಿಂಗ್ ಪತ್ತೆಯಾಗಿದ್ದರಿಂದ ಅನುಮಾನಗೊಂಡು ಸೆರೆಹಿಡಿದೆವು ಎಂದು ಹರಿನಗರ ಸೆಕ್ಟರ್‌ನ ಮನ್ಯಾರಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  ಪಾರಿವಾಳದ ಕಾಲಿನಲ್ಲಿರುವ ರಿಂಗ್ ಹಾಗೂ ಇದನ್ನು ಯಾರು ಸಾಕಿದ್ದರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕಥುವಾ ಪೊಲೀಸರು ತಿಳಿಸಿದ್ದಾರೆ.

  ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾರಿ ಭೂಕಂಪ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts