More

  ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾರಿ ಭೂಕಂಪ

  ಇಂಫಾಲ: ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರದಲ್ಲಿ ಸೋಮವಾರ ರಾತ್ರಿ 8.15ರಲ್ಲಿ ಭಾರಿ ಭೂಕಂಪನ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದೆ.

  ದೇಶ ಕೋವಿಡ್​-19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲೇ ಭೂಕಂಪನ ಸಂಭವಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

  ಅಸ್ಸಾಂನ ಗುವಾಹಟಿ ಮತ್ತು ಸುತ್ತಮುತ್ತಲ ಪ್ರದೇಶಗಳು, ಮೇಘಾಲಯ, ನಾಗಾಲ್ಯಾಂಡ್​ ಮತ್ತು ಮಿಜೋರಾಂಗಳಲ್ಲೂ ಕಂಪನದ ಅನುಭವವಾಗಿದೆ.

  ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ಮಣಿಪುರದ ನೈಋತ್ಯ ಭಾಗದ 13 ಕೀ.ಮೀ. ದೂರದಲ್ಲಿರುವ ಮೋಯಿರಾಂಗ್​ ಎಂಬಲ್ಲಿ 40 ಕಿ.ಮೀ. ಆಳದಲ್ಲಿ ಕಂಪನ ಕೇಂದ್ರೀಕೃತವಾಗಿತ್ತು.

  ಆಸ್ತಿ ಹಾಗೂ ಪ್ರಾಣ ಹಾನಿಯಾದ ಬಗ್ಗೆ ತಕ್ಷಣವೇ ಮಾಹಿತಿಗಳು ಲಭ್ಯವಾಗಿಲ್ಲ. ಮೇ 22ರಂದು ಕೂಡ ಮಣಿಪುರದಲ್ಲಿ ಭೂಕಂಪನ ಸಂಭವಿಸಿತ್ತು. ರಿಕ್ಟರ್​ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts