ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾರಿ ಭೂಕಂಪ

ಇಂಫಾಲ: ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರದಲ್ಲಿ ಸೋಮವಾರ ರಾತ್ರಿ 8.15ರಲ್ಲಿ ಭಾರಿ ಭೂಕಂಪನ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 5.5 ತೀವ್ರತೆ ದಾಖಲಾಗಿದೆ. ದೇಶ ಕೋವಿಡ್​-19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲೇ ಭೂಕಂಪನ ಸಂಭವಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಸ್ಸಾಂನ ಗುವಾಹಟಿ ಮತ್ತು ಸುತ್ತಮುತ್ತಲ ಪ್ರದೇಶಗಳು, ಮೇಘಾಲಯ, ನಾಗಾಲ್ಯಾಂಡ್​ ಮತ್ತು ಮಿಜೋರಾಂಗಳಲ್ಲೂ ಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ಮಣಿಪುರದ ನೈಋತ್ಯ ಭಾಗದ 13 ಕೀ.ಮೀ. ದೂರದಲ್ಲಿರುವ ಮೋಯಿರಾಂಗ್​ ಎಂಬಲ್ಲಿ 40 ಕಿ.ಮೀ. ಆಳದಲ್ಲಿ ಕಂಪನ … Continue reading ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾರಿ ಭೂಕಂಪ