ರಾಜ್ಯಧಾನಿ ಸಮೀಪ ಅಗ್ನಿ ದುರಂತ! ಹೊತ್ತಿ ಉರಿಯುತ್ತಿದೆ ಕೆಮಿಕಲ್ ಫ್ಯಾಕ್ಟರಿ

fire
Published on

ಆನೇಕಲ್: ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೆಮಿಕಲ್ ಫ್ಯಾಕ್ಟರಿ ಹೊತ್ತಿ ಉರಿಯುತ್ತಿದೆ. ಜಿಗಣಿಯ ಕೋನಸಂದ್ರಕ್ಕೆ ಹೋಗುವ ರಸ್ತೆಯಲ್ಲಿರುವ ಸ್ಟೆಲ್ಲಿನ್ಸ್ ಪಾರ್ಮಾಸೈನ್ಸ್ ಕಂಪನಿಯಲ್ಲಿ ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಯಲ್ಲಿ ಶಾರ್ಟ್​ಸರ್ಕಿಟ್​ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆಯ ತೀವ್ರತೆ ಹೆಚ್ಚಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net