More

    ನಾಲೆ ಬಳಿ ಬೈಕ್-ಚಪ್ಪಲಿ ಬಿಟ್ಟು ಹೋದ ಪ್ರೇಮಿಗಳು ಶವವಾಗಿ ಪತ್ತೆ: ಡೆತ್​ನೋಟ್​ನಲ್ಲಿತ್ತು ಯುವತಿಯ ಆಕ್ರೋಶ!

    ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಸಮೀಪ ನಾಲೆಯ ಪಕ್ಕದಲ್ಲಿ ಬೈಕ್​ ಹಾಗೂ ಚಪ್ಪಲಿಗಳನ್ನು ಬಿಟ್ಟು ಕಣ್ಮರೆಯಾಗಿದ್ದ ಪ್ರೇಮಿಗಳಿಬ್ಬರು ತಿಪಟೂರು ತಾಲೂಕು ನೊಣವಿನಕೆರೆ ಬಳಿ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಚನ್ನರಾಯಪಟ್ಟಣದ ಹಿರೀಸಾವೆ ಹೋಬಳಿ ಮತಿಘಟ್ಟ ಗ್ರಾಮದ ಸಣ್ಣಪ್ಪ ಎಂಬುವರ ಪುತ್ರ ರಮೇಶ್​(19) ಹಾಗೂ ಹಿರೀಸಾವೆ ಗ್ರಾಮದ ಶೇಖರ್​ ಎಂಬುವರ ಪುತ್ರಿ ಸುಶ್ಮಿತಾ(19) ಮೃತ ದುರ್ದೈವಿಗಳು. ಶವವಾಗಿ ಪತ್ತೆಯಾಗಿರುವ ಸುಶ್ಮಿತಾ ಡೆತ್​ನೋಟ್​ ಬರೆದಿದ್ದು, ತನ್ನ ಪ್ರೀತಿಗೆ ಅಡ್ಡಗಾಲಾದ ಗೆಳತಿಯರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    “ಅಮ್ಮ ನಾನು ನಿಮಗೆ ಯಾವುದರಲ್ಲೂ ಖುಷಿ ಕೊಟ್ಟಿಲ್ಲ. ನಾನು ಬದಲಾಗಿದ್ದೇನೆ ಅಂದ್ರೂ ಯಾರೂ ನಂಬಲಿಲ್ಲ. ಎಲ್ಲರೂ ತಪ್ಪು ಮಾಡ್ತಾರೆ, ತಪ್ಪು ಅರ್ಥ ಆದ್ರೆ ಸರಿ ಮಾಡ್ಕೋತಾರೆ. ಅದನ್ನೇ ನಾನು ಮಾಡಿದೆ. ಆದರೆ ನಿಮಗೆ ಅದು ಅರ್ಥನೇ ಆಗಲಿಲ್ಲ. ಏನು ಮಾಡಕ್ಕೆ ಆಗಲ್ಲ, ನಾನು ಇದ್ದಾಗಲೂ ನಿಮಗೆ ಏನು ಮಾಡಲು ಆಗಲಿಲ್ಲ. ನಾನು ಸತ್ತಾದರೂ ನಿಮಗೆ ಒಳ್ಳೆಯದನ್ನು ಮಾಡುತ್ತೇನೆ. ಆದರೆ ಒಂದಂತೂ ನಿಜ. ನನ್ನ ಈ ಪರಿಸ್ಥಿತಿಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ (ಗೆಳತಿಯರ ಹೆಸರು ಬರೆದಿದ್ದಾರೆ.). ಬೈಯ್ಯುವಾಗ ಯೋಚನೆ ಮಾಡಿ ಅಮ್ಮ’ ಎಂದು ಡೆತ್​ ನೋಟ್​ನಲ್ಲಿ ಬರೆಯಲಾಗಿದೆ.

    ನಾಲೆ ಬಳಿ ಬೈಕ್-ಚಪ್ಪಲಿ ಬಿಟ್ಟು ಹೋದ ಪ್ರೇಮಿಗಳು ಶವವಾಗಿ ಪತ್ತೆ: ಡೆತ್​ನೋಟ್​ನಲ್ಲಿತ್ತು ಯುವತಿಯ ಆಕ್ರೋಶ!ಬಾಗೂರಿನಲ್ಲಿ ಐಟಿಐ ಓದುತ್ತಿದ್ದ ರಮೇಶ್​ ಹಾಗೂ ಪದವಿ ಓದುತ್ತಿದ್ದ ಸುಶ್ಮಿತಾ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಅಂತರ್ಜಾತಿ ಎಂಬ ಕಾರಣಕ್ಕೆ ಮನೆಯವರು ತಮ್ಮ ಪ್ರೀತಿಯನ್ನು ವಿರೋಧಿಸಬಹುದು ಎಂದು ಹೆದರಿದ ಪ್ರೇಮಿಗಳು ನ.17 ರಂದು ಬಾಗೂರು ಸಮೀಪ ಹೇಮಾವತಿ ನಾಲೆಯ ಸುರಂಗದ ಬಳಿ ಬೈಕ್​ ನಿಲ್ಲಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ನಾಲೆಯ ಬಳಿ ಬೈಕ್​ ಹಾಗೂ ಚಪ್ಪಲಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ಹಿರೀಸಾವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪ್ರೇಮಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

    ಗುರುವಾರ ಸಂಜೆ ತಿಪಟೂರು ತಾಲೂಕು ನೊಣವಿನಕೆರೆ ಬಳಿ ನಾಲೆಯಲ್ಲಿ ಜೋಡಿ ಶವಗಳು ತೇಲುತ್ತಿದ್ದ ವಿಡಿಯೋ ವೈರಲ್​ ಆಗಿತ್ತು. ಪ್ರೇಮಿಗಳಿಬ್ಬರು ಅಪ್ಪಿಕೊಂಡು ವೇಲ್​ನಿಂದ ಸೊಂಟಕ್ಕೆ ಕಟ್ಟಿಕೊಂಡ ಸ್ಥಿತಿಯಲ್ಲಿದ್ದರು. ಇದನ್ನು ಗಮನಿಸಿದ ನೊಣವಿನಕೆರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದರು.

    ಎರಡು ದಿನಗಳ ಹಿಂದೆ ಹಿರೀಸಾವೆ ಪೊಲೀಸ್​ ಠಾಣೆಯಲ್ಲಿ ಸುಶ್ಮಿತಾ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿತ್ತು. ಅದರ ಆಧಾರದ ಮೇಲೆ ಈ ಪ್ರೇಮಿಗಳ ಗುರುತು ಪತ್ತೆ ಹಚ್ಚಲಾಯಿತು.

    ನೊಣವಿನಕೆರೆ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಎರಡೂ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಮತಿಘಟ್ಟ ಗ್ರಾಮದಲ್ಲಿ ರಮೇಶ್​ ಹಾಗೂ ಹಿರೀಸಾವೆಯಲ್ಲಿ ಸುಶ್ಮಿತಾಳ ಅಂತ್ಯಸಂಸ್ಕಾರ ಗುರುವಾರ ರಾತ್ರಿ ನಡೆಯಿತು.

    ಸುಶ್ಮಿತಾ ನಾಪತ್ತೆಯಾಗಿರುವ ಪ್ರಕರಣ ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದರೆ, ಮೃತದೇಹಗಳು ಪತ್ತೆಯಾಗಿರುವ ಪ್ರಕರಣ ತುಮಕೂರು ಜಿಲ್ಲೆ ನೊಣವಿನಕೆರೆ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.

    ರಾತ್ರೋರಾತ್ರಿ ಮನೆಯಲ್ಲೇ ಪತ್ನಿಯನ್ನು ಕೊಚ್ಚಿ ಹಾಕಿದ ಭೂಪ! ಮಗನ ಕೃತ್ಯಕ್ಕೆ ಬೆಚ್ಚಿದ ತಾಯಿಯೂ ಬದುಕಲಿಲ್ಲ

    ಪೊಲೀಸ್​ ಎಂದು ಜೀಪ್​ನಲ್ಲಿ ಬಂದ ಆರು ಜನ ಮಾಡಬಾರದ್ದನ್ನ ಮಾಡಿ ಸಿಕ್ಕಿಬಿದ್ದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts