More

    ಮುಂಬೈನಲ್ಲಿ ಬೆಂಕಿ ಅವಘಡ: 7ಮಂದಿ ದುರ್ಮರಣ

    ಮುಂಬೈ: ಮಹಾರಾಷ್ಟ್ರ ರಾಜಧಾನಿಯಲ್ಲಿ ಭಾರಿ ಅಗ್ನಿ ಅನಾಹುತ ಜರುಗಿದೆ. ಉಪನಗರ ಗೋರೇಗಾಂವ್​ನಲ್ಲಿ ಶುಕ್ರವಾರ 7ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮಹಿಳೆಯರು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದೆ. ಬೆಂಕಿ ಅವಘಡದಲ್ಲಿ 51 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಸಿರಿಯಾದಲ್ಲಿ ಭೀಕರ ಡ್ರೋಣ್​ ದಾಳಿ: 100ಕ್ಕೂ ಹೆಚ್ಚು ಮಂದಿ ದುರ್ಮರಣ
    ಗೋರೆಗಾಂವ್​ನ ಪಶ್ಚಿಮದ ಎಂಜಿ ರಸ್ತೆಯಲ್ಲಿನ ಕಟ್ಟಡದಲ್ಲಿ ನಿವಾಸಿಗಳು ಮುಂಜಾನೆ ಸವಿನಿದ್ರೆಯಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಪಕ್ಕದ ಮನೆಗಳಿಗೂ ವ್ಯಾಪಿಸಿದೆ. ಬೆಂಕಿ ನೆಲ ಮಹಡಿಯಲ್ಲಿ ಪ್ಲೈವುಡ್, ಸ್ಕ್ರ್ಯಾಪ್ ವಸ್ತುಗಳು ಇದ್ದಿದ್ದರಿಂದ ಕ್ಷಣಾರ್ಧದಲ್ಲಿ ಇಡೀ ನೆಲಮಾಳಿಗೆ ವ್ಯಾಪಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಇಬ್ಬರು ಪುರುಷ ಮತ್ತು ಐವರು ಮಹಿಳೆಯರು ಬೆಂಕಿಯ ಕೆನ್ನಾಲಿಗೆಗೆ ದಹಿಸಿ ಹೋಗಿದ್ದರು. 15 ಮಂದಿ ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಸುಮಾರು 2000 ಚದರ ಅಡಿಯಲ್ಲಿರುವ ಬಾಗಿಲುಗಳು, ಕಿಟಕಿಗಳು, ಪೀಠೋಪಕರಣಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿಕ್ಕಿಂ ಪ್ರವಾಹ: 21 ಸಾವು, 100 ಕ್ಕೂ ಹೆಚ್ಚು ಮಂದಿ ನಾಪತ್ತೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts