ಸಿಕ್ಕಿಂ ಪ್ರವಾಹ: 21 ಸಾವು, 100 ಕ್ಕೂ ಹೆಚ್ಚು ಮಂದಿ ನಾಪತ್ತೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

sikkim
Published on

ಸಿಕ್ಕಿಂ: ಸಿಕ್ಕಿಂನ ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾದ ನಂತರ 21 ಜನರು ಸಾವನ್ನಪ್ಪಿದ್ದಾರೆ ಮತ್ತು 23 ಸೇನಾ ಸಿಬ್ಬಂದಿ ಸೇರಿದಂತೆ 70 ಜನರು ನಾಪತ್ತೆಯಾಗಿದ್ದಾರೆ.


ಈಗಾಗಲೇ ಸೇನಾ ಸಿಬ್ಬಂದಿ ಸೇರಿದಂತೆ ಕಾಣೆಯಾಗಿರುವ ಜನರನ್ನು ಪತ್ತೆ ಹಚ್ಚಲು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಉತ್ತರ ಸಿಕ್ಕಿಂನ ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ ಸರೋವರದ ಮೇಲೆ ಮೋಡ ಒಡೆದು ಹಠಾತ್ ಪ್ರವಾಹಕ್ಕೆ ಕಠಾರಣವೆಂದು ಹೈದರಾಬಾದ್ ಮೂಲದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು ತೋರಿಸಿದೆ.


ಬುರ್ಡಾಂಗ್ ಪ್ರದೇಶದಿಂದ ಕಾಣೆಯಾಗಿದ್ದ 23 ಸೇನಾ ಸಿಬ್ಬಂದಿಗಳಲ್ಲಿ, ಏಳು ಮಂದಿಯ ಮೃತದೇಹಗಳು ಸಿಕ್ಕಿವೆ. ನಾಪತ್ತೆಯಾದ 15 ಮಂದಿಯ ಕಾರ್ಯಾಚರಣೆ ಮುಂದುವರೆದಿದೆ ಎಂದು ಮುಖ್ಯಮಂತ್ರಿ ಪಿಎಸ್ ತಮಾಂಗ್ ಮಾಹಿತಿ ನೀಡಿದ್ದಾರೆ.


ಪ್ರವಾಹದಿಂದಾಗಿ ರಾಜ್ಯದಲ್ಲಿ 13 ಸೇತುವೆಗಳು ನಾಶವಾಗಿದ್ದು, ಮಂಗನ್ ಜಿಲ್ಲೆಯೊಂದರಲ್ಲೇ ಎಂಟು ಸೇತುವೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಗ್ಯಾಂಗ್‌ಟಾಕ್‌ನಲ್ಲಿ ಮೂರು ಮತ್ತು ನಾಮ್ಚಿಯಲ್ಲಿ ಎರಡು ಸೇತುವೆಗಳು ಪ್ರವಾಹದ ಜತೆ ಸೇರಿದೆ.


ನಾಪತ್ತೆಯಾಗಿರುವ ಭಾರತೀಯ ಸೇನೆಯ ಯೋಧರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ತೀಸ್ತಾ ಬ್ಯಾರೇಜ್‌ನ ಕೆಳಭಾಗದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net