ಗುರುಪುರ: ಮಂಗಳೂರು ತಾಲೂಕಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ವಿಶೇಷ ಆರ್ಥಿಕ ವಲಯದಲ್ಲಿ (ಸೆಝ್) ಇರುವ ಅಥೆಂಟಿಕ್ ಓಷನ್ ಟ್ರೆಶರ್ (ಎಒಟಿ) ಮೀನು ಸಂಸ್ಕರಣಾ ಫ್ಯಾಕ್ಟರಿಯಲ್ಲಿ ಭಾನುವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ.
ಕ್ವಿಂಟಾಲುಗಟ್ಟಲೆ ಮೀನು ಆಹುತಿ
ಅಗ್ನಿ ಅವಘಡದಿಂದ ಮೀನು ಸಂಸ್ಕರಣಾ ಫ್ಯಾಕ್ಟರಿಯಲ್ಲಿ ದಾಸ್ತಾನು ಮಾಡಿಟ್ಟಿದ್ದ ಕ್ವಿಂಟಾಲುಗಟ್ಟಲೆ ಮೀನು ಸುಟ್ಟು ಹೋಗಿದೆ. ಘಟನಾ ಸ್ಥಳಕ್ಕಾಗಮಿಸಿದ ಎಂಎಸ್‌ಇಝಡ್‌ನ ಅಗ್ನಿಶಾಮಕ ತಂಡ, ಎಂಆರ್‌ಪಿಎಲ್, ಜಿಎಂಪಿಎಲ್ ಅಗ್ನಿಶಾಮಕ ತಂಡಗಳು ಅಗ್ನಿ ನಂದಿಸಲು ಕಾರ್ಯಾಚರಣೆ ನಡೆಸಿವೆ.
ಯಾವುದೇ ಜೀವಹಾನಿಯಾಗಿಲ್ಲ
ಸರ್ವಋತುವಲ್ಲಿ ಇಲ್ಲಿಂದ ಯೂರೋಪ್ ದೇಶಗಳಿಗೆ ಮೀನು ರಫ್ತು ಮಾಡಲಾಗುತ್ತದೆ. ಮೀನಿನ ಅಲಭ್ಯತೆಯಿಂದ ಮಳೆಗಾಲದಲ್ಲಿ ಈ ಫ್ಯಾಕ್ಟರಿಯಲ್ಲಿ ಯಾವುದೇ ಕಾರ್ಮಿಕರು ಕೆಲಸ ಮಾಡುತ್ತಿಲ್ಲ. ಹಾಗಾಗಿ ಅಗ್ನಿ ಅವಘಡದಲ್ಲಿ ಯಾವುದೇ ಜೀವಹಾನಿಯಾಗಿಲ್ಲ ಎಂದು ಬಜ್ಪೆ ಪೊಲೀಸ್ ಮೂಲಗಳು ಹೇಳಿವೆ.