ಕನ್ನಡಿಗರನ್ನು ಕೆರಳಿಸಿದ್ದಕ್ಕೆ ಎಫ್ಐಆರ್ ದಾಖಲು; ವಿವಾದದ ಬಗ್ಗೆ ಮೌನ ಮುರಿದ ಸೋನು ನಿಗಮ್​| Sonu nigam

sonu
Published on

First reaction: ಬೆಂಗಳೂರಿನ ಕಾಲೇಜು ಒಂದರಲ್ಲಿ ನಡೆದ ಈವೆಂಟ್ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ 'ಕನ್ನಡ ಹಾಡು ವಿನಂತಿ ಮಾಡಿದಕ್ಕೆ ಪಹಲ್ಲಾಮ್‌ನಲ್ಲಿ ಆಗಿದ್ಯಲ್ಲ.. ಅದಕ್ಕೆ ಇದೇ ಕಾರಣ ಎಂದಿದ್ದರು. ಇದೀಗ ಈ ವಿಚಾರಕ್ಕೆ ಸಬಂಧಪಟ್ಟಂತೆ ಸೋನು ವಿರುದ್ಧ ಬೆಂಗಳೂರಿನಲ್ಲಿ ಶನಿವಾರ ಕೇಸ್ ದಾಖಲಾಗಿದೆ. ಇದರ ಬೆನ್ನಲ್ಲೇ ತಮ್ಮ ಹೇಳಿಕೆ ಕುರಿತು ಸೋನು ನಿಗಮ್​ ಪ್ರತಿಕ್ರಿಯಿಸಿದ್ದು ತಮ್ಮನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಕನ್ನಡ ಕನ್ನಡ ಕನ್ನಡ ಎಂದು ಖುಷಿಯಲ್ಲಿ ಹೇಳುವುದಕ್ಕೂ ಹಾಗೂ ಕೋಪದಿಂದ ಬೆದರಿಕೆಯೊಡ್ಡುವ ರೀತಿ ಕನ್ನಡ ಕನ್ನಡ ಎಂದು ಹೇಳುವುದಕ್ಕೂ ವ್ಯತ್ಯಾಸ ಇದೆ. ನಾನು ಕಾರ್ಯಕ್ರಮ ಕೊಡುವಾಗ ನಾಲ್ಕೈದು ಜನ ಗೂಂಡಾಗಳ ಹಾಗೆ ಇದ್ದರು. ಬೇರೆಯವರು ಕೂಡ ಅವರಿಗೆ ಬುದ್ದಿ ಹೇಳಿದ್ದರು. ಅಲ್ಲಿ ಆ ನಾಲ್ಕೈದು ಜನರಿಗೆ ತಿಳುವಳಿಕೆ ಹೇಳುವುದು ಅಗತ್ಯವಿತ್ತು ಎಂದಿದ್ದಾರೆ.

ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ಯಾಂಟ್​ ತೆಗೆಸಿದರೆ ಹೊರತು, ಯಾವ ಭಾಷೆ ಎಂದು ಯಾರು ಕೂಡ ಕೇಳಲಿಲ್ಲ ಎನ್ನುವುದನ್ನು ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಪ್ರದೇಶಕ್ಕೆ, ರಾಜ್ಯಕ್ಕೆ ಹೋದರು ಇಂತಹ ನಾಲ್ಕೈದು ಜನರು ಇದ್ದೇ ಇರುತ್ತಾರೆ. ನಾನು ಭಾಷೆಯ ಬಗ್ಗೆ ಅಪಮಾನ ಮಾಡಿಲ್ಲ ಎನ್ನುವುದನ್ನು ಸೋನು ನಿಗಮ್ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.

ಏನಿದು ಪ್ರಕರಣ..?

ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ ಸೋನ್ ನಿಗಮ್ ಗಾಯನ ಮಾಡುತ್ತಿದ್ದ ಸಮಯದಲ್ಲಿ ಕೆಲವರು, ಕನ್ನಡ, ಕನ್ನಡ(ಕನ್ನಡ ಹಾಡು ಹೇಳಿ) ಎಂದಿದ್ದಕ್ಕೆ ಸೋನು ನಿಗಮ್ ಏಕಾಏಕಿ ಗರಂ ಆಗಿದ್ದಾರೆ. ಮುಂದುವರೆದು, "ಕನ್ನಡ.. ಕನ್ನಡ.. ಇದೇ ಕಾರಣ.. ಪಹಲ್ಲಾಮ್‌ನಲ್ಲಿ ಆಗಿದ್ಯಲ್ಲ.. ಅದಕ್ಕೆ ಇದೇ ಕಾರಣ. ಈಗ ನೀವು ಏನು ಮಾಡಿದ್ರಲ್ಲ.. ಅದೇ ಕಾರಣ!" ಎಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

(ಏಜೆನ್ಸೀಸ್)

ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋನು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಿನ್ನೆಯಷ್ಟೇ ಕರವೇ ತಂಡ ಅವಲಹಳ್ಳಿ ಠಾಣೆ ಭೇಟಿ ನೀಡಿ ದೂರಿಗೆ ಒತ್ತಾಯಿಸಲಾಗಿತ್ತು. ವಿಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು (NS 351(1)), ಕನ್ನಡಿಗ ಸಮುದಾಯದ ಸಾಂಸ್ಕೃತಿಕ ಅಥವಾ ಭಾಷಿಕ ವ್ಯಕ್ತಿಗಳ ಮೇಲೆ ಪರಿಣಾಮ, (BNS 352(2)) ಹಾಗೂ BNS 353 ಧಾರ್ಮಿಕ ಅಥವಾ ಭಾಷಿಕ ಭಾವನೆಗಳನ್ನು ಕೆರಳಿಸುವುದು. ಈ ಮೂರು ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net