ಇಂಡೋನೇಷ್ಯಾದ ಸುಲಾವೆಸಿ ಪ್ರದೇಶದಲ್ಲಿ 6.0 ತೀವ್ರತೆಯ ಭೂಕಂಪ| Earthquake

Earthquake
Published on

Indonesia | ಇಂಡೋನೇಷ್ಯಾದ ಸುಲಾವೆಸಿ ಪ್ರದೇಶದಲ್ಲಿ ಶನಿವಾರ (3) 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಇಂಡೋನೇಷ್ಯಾದ ಹವಾಮಾನಶಾಸ್ತ್ರ ಮತ್ತು ಭೂಭೌತಶಾಸ್ತ್ರ ಸಂಸ್ಥೆ ಹೇಳಿದೆ.

ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಭೂಕಂಪದ ತೀವ್ರತೆ 5.9 ರಷ್ಟಿದ್ದು, 109 ಕಿ.ಮೀ ಆಳದಲ್ಲಿದೆ ಎಂದು ಅಂದಾಜಿಸಿದೆ. ಸದ್ಯ ಈ ಭೂಕಂಪದಿಂದ ಯಾವುದೇ ಸುನಾಮಿ ಸಂಭವಿಸುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ.

ಸುಲವೇಸಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಜಾಗರೂಕರಾಗಿರಲು ಮತ್ತು ಅಧಿಕೃತ ಆದೇಶವನ್ನು ಅನುಸರಿಸುವಂತೆ ಸೂಚಿಸಲಾಗಿದೆ.

ಇಂಡೋನೇಷ್ಯಾದ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಆರಂಭಿಕ ವರದಿಗಳು ಭೂಕಂಪವು ಯಾವುದೇ ಅಡಚಣೆಗಳನ್ನು ಉಂಟುಮಾಡಿಲ್ಲ ಎಂದು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net