

ಮಸ್ಕತ್ತಿನ ಅಲ್ ಘುಬ್ರ ಆರ್ಟ್ ಲಿವಿಂಗ್ ಪ್ರೈವೇಟ್ ಸ್ಕೂಲ್’ನಲ್ಲಿ ನಡೆದ ಶೈಕ್ಷಣಿಕ ವರ್ಷದ(2024-25)ವಾರ್ಷಿಕ ಪರೀಕ್ಷೆಯಲ್ಲಿ ಮಸ್ಕತ್ ಕನ್ನಡ ಶಾಲೆಯ ಒಂದರಿಂದ ಐದನೆಯ ತರಗತಿಯ ಸುಮಾರು 120 ಕ್ಕೂ ಅಧಿಕ ಮಕ್ಕಳು ಪರೀಕ್ಷೆ ಬರೆದಿದ್ದಾರೆ.
Muscat | ಕರ್ನಾಟಕ ಸಂಘ ಮಸ್ಕತ್ತಿನ ಕನ್ನಡ ಶಾಲೆಯ 2024-2025 ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆ 2-05-2025 ರಂದು ಯಶಸ್ವಿಯಾಗಿ ನಡೆಯಿತು.
ಇನ್ನೂ ಮಕ್ಕಳಿಗೆ ವರ್ಷದುದಕ್ಕೂ ಕನ್ನಡ ಓದಲು ಹಾಗು ಬರೆಯಲು ಕಲಿಸಿಕೊಟ್ಟು ಪರೀಕ್ಷೆ ಬರೆಯಲು ಶ್ರಮಿಸಿದ ಎಲ್ಲ ಶಿಕ್ಷಕಿಯರಿಗೂ ಕರ್ನಾಟಕ ಸಂಘ ಮಸ್ಕತ್ತಿನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ 18 ವರ್ಷಗಳಿಂದ ನಡೆಯುತ್ತಿರುವ ಈ ಶಾಲೆಯಲ್ಲಿ ಪ್ರಸಕ್ತ ಒಂಭತ್ತು ಸ್ವಯಂ ಸೇವಕ ಶಿಕ್ಷಕಿಯರು ವಾರಾಂತ್ಯದಲ್ಲಿ ತರಗತಿಗಳ ಮೂಲಕ ವಿದೇಶದಲ್ಲಿ ಬೆಳೆಯುತ್ತಿರುವ ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದಾರೆ. ಇಲ್ಲಿ ಕನ್ನಡವನ್ನು ಕಲಿತ ಮಕ್ಕಳು ಭಾರತಕ್ಕೆ ಮರಳಿ ಉನ್ನತ ವ್ಯಾಸಂಗ ಮಾಡಿ ಕನ್ನಡವನ್ನು ಅನ್ಯ ಭಾಷಿಯರಿಗೂ ಕಲಿಸುವ ಉತ್ಸಾಹ ತೋರಿರುವುದು ಈ ಶಾಲೆಯ ಹೆಗ್ಗಳಿಕೆಯಾಗಿದೆ.